ಜಮ್ಮು-ಕಾಶ್ಮೀರದ ಪಂಚ್, ಸರ್ಪಂಚ್ ಗಳಿಗೆ ಭದ್ರತೆ, ವಿಮಾ ಸೌಲಭ್ಯ: ಅಮಿತ್ ಶಾ 

ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಸದಸ್ಯ(ಪಂಚ್) ಮತ್ತು ಗ್ರಾಮದ ಮುಖ್ಯಸ್ಥರಿಗೆ(ಸರ್ ಪಂಚ್) ಸೂಕ್ತ ಪೊಲೀಸ್ ಭದ್ರತೆ ಹಾಗೂ ತಲಾ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
 

Published: 03rd September 2019 04:53 PM  |   Last Updated: 03rd September 2019 04:56 PM   |  A+A-


Delegation met union home minister Amit Shah

ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಿಯೋಗ

Posted By : Sumana Upadhyaya
Source : Online Desk

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಸದಸ್ಯ(ಪಂಚ್) ಮತ್ತು ಗ್ರಾಮದ ಮುಖ್ಯಸ್ಥರಿಗೆ(ಸರ್ ಪಂಚ್) ಸೂಕ್ತ ಪೊಲೀಸ್ ಭದ್ರತೆ ಹಾಗೂ ತಲಾ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ನಿನ್ನೆ ಅವರನ್ನು ಭೇಟಿಯಾದ ಜಮ್ಮು-ಕಾಶ್ಮೀರದ ಪಂಚ್ ಮತ್ತು ಸರ್ ಪಂಚ್ ಅವರಿಗೆ ಗೃಹ ಸಚಿವರು ಈ ಭರವಸೆ ನೀಡಿದ್ದಾರೆ.

ನಮಗೆ ಭದ್ರತೆ ನೀಡಬೇಕೆಂದು ಕೇಳಿಕೊಂಡ ಮನವಿಗೆ ಸಚಿವ ಅಮಿತ್ ಶಾ ಅವರು ಒಪ್ಪಿಕೊಂಡಿದ್ದಾರೆ ಎಂದು ಕುಪ್ವಾರ ಜಿಲ್ಲೆಯ ಸರ್ಪಂಚ್ ಮಿರ್ ಜುನೈಡ್ ತಿಳಿಸಿದ್ದಾರೆ.


ಪ್ರತಿ ಪಂಚಾಯತ್ ಸದಸ್ಯ ಮತ್ತು ಗ್ರಾಮದ ಮುಖ್ಯಸ್ಥನಿಗೆ 2 ಲಕ್ಷದವರೆಗೆ ವಿಮಾ ಸೌಲಭ್ಯ ಕೂಡ ನೀಡುವುದಾಗಿ ಹೇಳಿದ್ದಾರೆ ಎಂದು ಮತ್ತೊಬ್ಬ ಸರ್ಪಂಚ್ ಶ್ರೀನಗರ ಜಿಲ್ಲೆಯ ಹರ್ವಾಣದ ಝುಬರ್ ನಿಶಾದ್ ಭಟ್ ತಿಳಿಸಿದ್ದಾರೆ.


ಮುಂದಿನ 15-20 ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಮೊಬೈಲ್  ಹಾಗೂ ಸ್ಥಿರ ದೂರವಾಣಿ ಸೇವೆಗಳನ್ನು ಮರುಸ್ಥಾಪಿಸಲಾಗುವುದು.
ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ಪ್ರತ್ಯೇಕ ರಾಜ್ಯದ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೂಡ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದರು.


6 ವರ್ಷಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಕಳೆದ ವರ್ಷ ಪಂಚಾಯತ್ ಚುನಾವಣೆ ನಡೆದಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp