ಮತ್ತೆ ಕಾಂಗ್ರೆಸ್ ಸೇರಲಿರುವ ಅಲ್ಕಾ ಲಂಬಾ? ರೆಬೆಲ್ ಎಎಪಿ ನಾಯಕಿಯಿಂದ ಸೋನಿಯಾ ಭೇಟಿ

2020 ರ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕಿ ಅಲ್ಕಾ ಲಂಬಾ ಅವರು ಮಂಗಳವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದಾರೆ.

Published: 03rd September 2019 04:54 PM  |   Last Updated: 03rd September 2019 07:26 PM   |  A+A-


ಸೋನಿಯಾ ಗಾಂಧಿ ಭೇಟಿಯಾದ ಅಲ್ಕಾ ಲಂಬಾ

Posted By : Raghavendra Adiga
Source : The New Indian Express

ನವದೆಹಲಿ: 2020 ರ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕಿ ಅಲ್ಕಾ ಲಂಬಾ ಅವರು ಮಂಗಳವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಗಾಂಧಿಯವರೊಂದಿಗೆ ಲಂಬಾ 50 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು ಚರ್ಚೆಯು ಯಾವ ವಿಷಯಗಳ ಮೇಲೆ ನಡೆದಿದೆ ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ.

ಕಳೆದ ಕೆಲವು ದಿನಗಳಿಂದ, ಲಂಬಾ ಕಾಂಗ್ರೆಸ್ ಪಕ್ಷ ಸೇರುವ ಕುರಿತಂತೆ ಸುಳಿವು ನಿಡಿದ್ದಂತೆ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಇತ್ತೀಚೆಗೆ, ದಿವಂಗತ ರಾಜೀವ್ ಗಾಂಧಿಯವರ 75 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ವೀರಭೂಮಿಯಲ್ಲಿ ಎಐಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ ಅವರು ಏಪ್ರಿಲ್ 4 ರಂದು ಎಎಪಿಗೆ ರಾಜೀನಾಮೆ ನೀಡಿದ್ದರು. "ನೀವು ದಿವಂಗತ ಕಾಂಗ್ರೆಸ್ ಮುಖಂಡ ಶೀಲಾ ದೀಕ್ಷಿತ್ ಅವರನ್ನು ಭ್ರಷ್ಟರೆಂದು ಕರೆದಿದ್ದೀರಿ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಬಯಸುತ್ತೀರಿ" ಎಂದು ಅವರು ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದಾರೆ.

ಎಎಪಿಗೆ ಸೇರುವ ಮೊದಲು ಕಾಂಗ್ರೆಸ್ ಮಹಿಳಾ ವಿಭಾಗದ ಸದಸ್ಯೆಯಾಗಿದ್ದ ಲಂಬಾ ಮುಂದಿನ ಚುನಾವಣೆಯಲ್ಲಿ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದಾಗಿ ಆಗಸ್ಟ್ ನಲ್ಲಿ ಘೋಷಿಸಿದ್ದರು.

ಎಎಪಿ ಟಿಕೆಟ್‌ನಲ್ಲಿ 2013 ರ ದೆಹಲಿ ಚುನಾವಣೆಯಲ್ಲಿ ಅವರು ಚಾಂದನಿ ಚೌಕ್ ವಿಧಾನಸಭಾ ಸ್ಥಾನದಿಂದ ಆಯ್ಕೆಯಾಗಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp