ಜಮ್ಮು-ಕಾಶ್ಮೀರದಿಂದ ನಿಯೋಗ ಭೇಟಿ: ಗೃಹ ಸಚಿವ ಅಮಿತ್ ಶಾ ನೀಡಿದ ಭರವಸೆಗಳೇನು?

ಮೊಬೈಲ್ ಫೋನ್ ಗಳ ಸೇವೆಗಳನ್ನು 20 ದಿನಗಳೊಳಗೆ ಮತ್ತೆ ಆರಂಭಿಸಲಾಗುವುದು, ಸ್ಥಳೀಯರ ಜಮೀನುಗಳನ್ನು ಹೊರಗಿನವರು ಖರೀದಿಸಲು ಬಿಡುವುದಿಲ್ಲ, ಪ್ರತಿ ಗ್ರಾಮದ 5 ಜನರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಇದು ಜಮ್ಮು-ಕಾಶ್ಮೀರದಿಂದ ಬಂದ ಪ್ರತಿನಿಧಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಭರವಸೆ.
 

Published: 04th September 2019 10:46 AM  |   Last Updated: 04th September 2019 11:37 AM   |  A+A-


A group of sarpanchs from J&K after meeting Home Minister Amit Shah at North Block in New Delhi on Tuesday

ಜಮ್ಮು-ಕಾಶ್ಮೀರದ ನಿಯೋಗ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ

Posted By : Sumana Upadhyaya
Source : The New Indian Express

ನವದೆಹಲಿ: ಮೊಬೈಲ್ ಫೋನ್ ಗಳ ಸೇವೆಗಳನ್ನು 20 ದಿನಗಳೊಳಗೆ ಮತ್ತೆ ಆರಂಭಿಸಲಾಗುವುದು, ಸ್ಥಳೀಯರ ಜಮೀನುಗಳನ್ನು ಹೊರಗಿನವರು ಖರೀದಿಸಲು ಬಿಡುವುದಿಲ್ಲ, ಪ್ರತಿ ಗ್ರಾಮದ 5 ಜನರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಇದು ಜಮ್ಮು-ಕಾಶ್ಮೀರದಿಂದ ಬಂದ ಪ್ರತಿನಿಧಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಭರವಸೆ.


ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ಜಮ್ಮು-ಕಾಶ್ಮೀರದ ರಾಜ್ಯ ಪ್ರಾತಿನಿಧಿತ್ವವನ್ನು ಮತ್ತೆ ಸ್ಥಾಪಿಸಲಾಗುವುದು. ಹೊಸ ಕೇಂದ್ರಾಡಳಿತ ಪ್ರದೇಶಗಳ ಪಂಚ್ ಮತ್ತು ಸರ್ಪಂಚ್ ಗಳಿಗೆ ತಲಾ 2 ಲಕ್ಷ ರೂಪಾಯಿ ವಿಮಾ ಯೋಜನೆ ಸೌಲಭ್ಯ ಒದಗಿಸಲಾಗುವುದು ಎಂದು ಸಹ ಹೇಳಿದರು.


ಗೃಹ ಇಲಾಖೆ ರಾಜ್ಯ ಸಚಿವರುಗಳಾದ ನಿತ್ಯಾನಂದ ರೈ ಮತ್ತು ಜಿ ಕೆ ರೆಡ್ಡಿ, ಪ್ರಧಾನ ಮಂತ್ರಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮತ್ತು ಗೃಹ ಸಚಿವಾಲಯ ಅಧಿಕಾರಿಗಳು ಜಮ್ಮು-ಕಾಶ್ಮೀರದ ಪಂಚಾಯತ್ ಸದಸ್ಯರು, ಹಣ್ಣು ಬೆಳೆಗಾರರ ಪ್ರತಿನಿಧಿಗಳು, ಪಾಕ್ ಆಕ್ರಮಿತ ಕಾಶ್ಮೀರ ಭಾಗದಿಂದ ಬೇರ್ಪಟ್ಟ ಜನರ ಗುಂಪುಗಳ ನಿಯೋಗವನ್ನು ನಿನ್ನೆ ಅಮಿತ್ ಶಾ ಭೇಟಿ ಮಾಡಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp