ಶಿವಕುಮಾರ್ ಜತೆ ನಾವಿದ್ದೇವೆ: ಡಿಕೆ ಸುರೇಶ್ ಗೆ ಸೋನಿಯಾ ಗಾಂಧಿ ಅಭಯ

ಬಿಜೆಪಿಯಿಂದ ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ನಾವು ಹಾಗೂ ಇಡೀ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಡಿ ಕೆ ಸುರೇಶ್ ಗೆ ಧೈರ್ಯ ತುಂಬಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಬಿಜೆಪಿಯಿಂದ ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ನಾವು ಹಾಗೂ ಇಡೀ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಡಿ ಕೆ ಸುರೇಶ್ ಗೆ ಧೈರ್ಯ ತುಂಬಿದ್ದಾರೆ.

ಗುರುವಾರ ಸಂಸದ ಡಿಕೆ ಸುರೇಶ್ ಅವರಿಗೆ ಕರೆ ಮಾಡಿ ಡಿಕೆ ಶಿವಕುಮಾರ್ ಅವರ ಬಗ್ಗೆ ಸೋನಿಯಾ ಗಾಂಧಿ ವಿಚಾರಿಸಿದರು. ಡಿಕೆ ಶಿವಕುಮಾರ್ ಅವರ ಆರೋಗ್ಯ ಹೇಗಿದೆ. ಅವರ ಮಾನಸಿಕ ಸ್ಥಿತಿ ಹೇಗಿದೆ ಎಂದು ವಿಚಾರಿಸಿದರು. 

ಸುಮಾರು ಮೂರು ನಿಮಿಷಗಳ ಕಾಲ ಮಾತನಾಡಿದ ಸೋನಿಯಾ ಗಾಂಧಿ ಅವರು 'ಬಿಜೆಪಿ ವಿರೋಧ ಪಕ್ಷಗಳ ನಾಯಕರನ್ನು ಮಟ್ಟಹಾಕಲು ದ್ವೇಷದ ರಾಜಕಾರಣ ಮಾಡುತ್ತಿದೆ.ಹೀಗಾಗಿ ಡಿಕೆ ಶಿವಕುಮಾರ್ ಅವರು ಧೈರ್ಯ ಕಳೆದುಕೊಳ್ಳುವುದು ಬೇಡ. ಈ ಸಮಯದಲಿ ನಾವೆಲ್ಲರು ಅವರ ಜತೆ ಇದ್ದೇವೆ' ಎಂದು ಸುರೇಶ್ ಅವರಿಗೆ ಭರವಸೆ ಮಾತುಗಳನ್ನಾಗಿದ್ದಾರೆ.

ದೆಹಲಿಯ ನಿವಾಸದಲ್ಲಿ 8.59 ಕೋಟಿ ರೂ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಡಿಕೆ ಶಿವಕುಮಾರ್ ಮಾನಸಿಕ ಒತ್ತಡ ಹಾಗೂ ಕಡಿಮೆ ರಕ್ತದೊತ್ತಡ ಹಾಗೂ ತೀವ್ರ ಸಕ್ಕರೆ ಅಂಶದಿಂದ ಬಳಲುತ್ತಿದ್ದರು.ಜೊತೆಗೆ ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯ ಅವರನ್ನು ಸೆ 13ರವರೆಗೆ  ಇಡಿ ವಶಕ್ಕೆ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com