ಶಿಕ್ಷಕರ ದಿನಾಚರಣೆಗೆ ವಿಶೇಷ ಡೂಡಲ್ ಬಿಡಿಸಿದ ಗೂಗಲ್

ದೇಶದಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಬಿಡಿಸುವ ಮೂಲಕ ಶಿಕ್ಷಕರಿಗೆ ವಿಶೇಷವಾಗಿ ಗೌರವಾರ್ಪಣೆ ಸಲ್ಲಿಸಿದೆ. 

Published: 05th September 2019 11:01 AM  |   Last Updated: 05th September 2019 12:05 PM   |  A+A-


Google Dedicates Doodle to Educators as India Celebrates Teachers' Day

ಶಿಕ್ಷಕರ ದಿನಾಚರಣೆಗೆ ವಿಶೇಷ ಡೂಡಲ್ ಬಿಡಿಸಿದ ಗೂಗಲ್

Posted By : Manjula VN
Source : Online Desk

ನವದೆಹಲಿ: ದೇಶದಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಬಿಡಿಸುವ ಮೂಲಕ ಶಿಕ್ಷಕರಿಗೆ ವಿಶೇಷವಾಗಿ ಗೌರವಾರ್ಪಣೆ ಸಲ್ಲಿಸಿದೆ. 

ಅಕ್ಟೋಬಸ್ ವೊಂದು ಶಿಕ್ಷಕನ ಮಾದರಿಯಲ್ಲಿ ಏಕ ಸಮಯದಲ್ಲಿ ಹಲವಾರು ಕೆಲಸಗಳನ್ನು ನಿಭಾಯಿಸುವ ರೀತಿಯಲ್ಲಿ ಗೂಗಲ್ ಡೂಡಲ್'ನ್ನು ವಿನ್ಯಾಸಗೊಳಿಸಿದೆ. 

ಅಕ್ಟೋಪಸ್ ನಗುತ್ತಾ ಗಣಿತದ ಸಮೀಕರಣಗಳನ್ನು ಪರಿಹರಿಸುವುದು, ರಸಾಯನಶಾಸ್ತ್ರದ ಸಮಸ್ಯೆಗಳನ್ನು ಹೇಳಿಕೊಡುವುದು, ಪುಸ್ತಕದ ಪ್ರತಿಗಳನ್ನು ಓದುವುದು, ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವುದು ಮತ್ತು ಸಂಗೀತದಲ್ಲಿ ಮಾರ್ಗದರ್ಶನ ಮಾಡುವುದನ್ನು ಈ ಡೂಡಲ್ ನಲ್ಲಿ ಕಾಣಬಹುದಾಗಿದೆ. ಇಲ್ಲಿ ಆಕ್ಟೋಪಸ್'ನ ವಿದ್ಯಾರ್ಥಿಗಳಾಗಿ ಮೀನುಗಳನ್ನು ತೋರಿಸಲಾಗಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp