ಕಟ್ಟಡದ ಅಡಿಪಾಯದಲ್ಲಿ ಬಂಗಾರ, ಆಭರಣ ಪತ್ತೆ

ಕಟ್ಟಡದ ಅಡಿಪಾಯವೊಂದರ ಉತ್ಖನನದಲ್ಲಿ ಹಿತ್ತಾಳೆಯ ಗಡಿಗೆಯಲ್ಲಿ  25 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.
ಕಟ್ಟಡದ ಅಡಿಪಾಯದಲ್ಲಿ ಬಂಗಾರ, ಆಭರಣ ಪತ್ತೆ
ಕಟ್ಟಡದ ಅಡಿಪಾಯದಲ್ಲಿ ಬಂಗಾರ, ಆಭರಣ ಪತ್ತೆ

ಹರದೋಯಿ: ಕಟ್ಟಡದ ಅಡಿಪಾಯವೊಂದರ ಉತ್ಖನನದಲ್ಲಿ ಹಿತ್ತಾಳೆಯ ಗಡಿಗೆಯಲ್ಲಿ  25 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.
  
ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಸಾಂಡಿ ಪಟ್ಟಣದಲ್ಲಿ ಈ ಆಭರಣಗಳು ಪತ್ತೆಯಾಗಿವೆ.
  
ಗುರುವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ,  ಕೊಟ್ಟಾಲಿಯ ಸಾಂಡಿ ಪಟ್ಟಣದ ಕಿಡಕಿಯಾಂ ಮೊಹಲ್ಲಾದಲ್ಲಿ ಕಟ್ಟಡವೊಂದರ ತಳಪಾಯವನ್ನು  ಅಗೆಯುವ ಕೆಲಸ ನಡೆಯುತ್ತಿದ್ದಾಗ, ಕಾರ್ಮಿಕರಿಗೆ ನೆಲದಲ್ಲಿ ಹುದುಗಿಟ್ಟು ಹಿತ್ತಾಳೆಯ  ಗಡಿಗೆ ಕಂಡಿದ್ದು, ಅದನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನ ಮತ್ತು ಬೆಳ್ಳಿಯ  ಆಭರಣಗಳು ತುಂಬಿದ್ದವು.

ಸಿಕ್ಕ ಆಭರಣಗಳನ್ನು  ಕಾರ್ಮಿಕರು ಪರಸ್ಪರ ಹಂಚಿಕೊಳ್ಳಲು ಪ್ರಯತ್ನಿಸಿದಂತಹ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ  ತಿಳಿದು, ಕಾರ್ಮಿಕರ ಬಳಿಯಲಿದ್ದ ಸುಮಾರು 25 ಲಕ್ಷ ರೂ. ಹೆಚ್ಚಿನ ಮೌಲ್ಯದ 600 ಗ್ರಾಂ  ಬಂಗಾರದ ಹಾಗೂ, 4.5 ಗ್ರಾಂನಷ್ಟು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಅಲೋಕ್ ಪ್ರಿಯದರ್ಶಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com