ಅಸ್ಸಾಂ ಎನ್ ಆರ್ ಸಿ: ಪ್ರತೀಕ್ ಹಜಿಲಾ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿಲ್ಲ,ಸಿಜೆಐಗೆ ತರುಣ್ ಗೊಗೊಯ್ ಪತ್ರ

ಕಳೆದ ವಾರ ಪ್ರಕಟಗೊಂಡ ರಾಷ್ಟ್ರೀಯ ಪೌರತ್ವ ನೋಂದಣಿ- ಎನ್ ಆರ್ ಸಿ ಅಂತಿಮ ಪಟ್ಟಿ ತಯಾರಿಯಲ್ಲಿ ಎನ್ ಆರ್ ಸಿ ರಾಜ್ಯ ಸಮನ್ವಯಾಧಿಕಾರಿ  ಪ್ರತೀಕ್ ಹಜಿಲಾ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿಲ್ಲ, ಈ ವಿಚಾರವನ್ನು ಪುನರ್ ಪರಿಶೀಲಿಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ತರುಣ್ ಗೋಗೊಯ್  ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.
ತರುಣ್ ಗೋಗೊಯ್
ತರುಣ್ ಗೋಗೊಯ್

ಗುವಾಹಟಿ: ಕಳೆದ ವಾರ ಪ್ರಕಟಗೊಂಡ ರಾಷ್ಟ್ರೀಯ ಪೌರತ್ವ ನೋಂದಣಿ- ಎನ್ ಆರ್ ಸಿ ಅಂತಿಮ ಪಟ್ಟಿ ತಯಾರಿಯಲ್ಲಿ ಎನ್ ಆರ್ ಸಿ ರಾಜ್ಯ ಸಮನ್ವಯಾಧಿಕಾರಿ  ಪ್ರತೀಕ್ ಹಜಿಲಾ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿಲ್ಲ, ಈ ವಿಚಾರವನ್ನು ಪುನರ್ ಪರಿಶೀಲಿಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ತರುಣ್ ಗೋಗೊಯ್  ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.

ಅಸ್ಸಾಂನಲ್ಲಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಮಾಡಲಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ  ಪಟ್ಟಿಯಲ್ಲಿ 19 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ.

ಎನ್ ಆರ್ ಸಿ ಅಂತಿಮ  ಪಟ್ಟಿ ತಯಾರಿಕೆಗಾಗಿ 50 ಸಾವಿರ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು 1 ,200 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ . ಆದಾಗ್ಯೂ, ಹಜಿಲಾ ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಿಲ್ಲ ಎಂದು ಗೋಗಯ್ ಸಿಜೆಐಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಎನ್ ಆರ್ ಸಿ ಪಟ್ಟಿಯಿಂದ ಕೈ ಬಿಡಲಾಗಿರುವ ಲಕ್ಷಾಂತರ ಜನರ ಭವಿಷ್ಯದ ಪ್ರಶ್ನೆ ಎದುರಾಗಿದೆ.  ನಾಗರಿಕತ್ವ ಸಾಬೀತುಪಡಿಸಲು ವಿದೇಶಿ ನ್ಯಾಯಾಧೀಕರಣದ ಬಳಿ ಹೋದರೆ ಕಿರುಕುಳ ಅನುಭವಿಸುತ್ತಾರೆ. ಅದು ಅವರ ತಪ್ಪಲ್ಲ, ಎನ್ ಆರ್ ಸಿ ಪ್ರಾಧಿಕಾರದ ಅದಕ್ಷತೆಯಿಂದಾಗಿ ಈ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.

ಎನ್ ಆರ್ ಸಿ ಪಟ್ಟಿಯಲ್ಲಿ ಹೆಸರು ಇಲ್ಲದವರನ್ನು 1966 ಮತ್ತು 2019ರ ಮತದಾರರ ಪಟ್ಟಿಯಿಂದಲೂ ಕೈಬಿಡಲಾಗಿದೆ.  ಭಾರತೀಯ ಪೌರತ್ವವನ್ನು ಕಾನೂನುಬದ್ದವಾಗಿ ಪಡೆಯಲು ಮಾರ್ಚ್ 24, 1971ರನ್ನು ಕಡೆಯ ದಿನ ಎನ್ನಲಾಗಿದೆ. ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವೇ ಸಿದ್ಧಪಡಿಸಿದ್ದು, ಈಗ ಹೇಗೆ ಎನ್ ಆರ್ ಸಿ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮ ದೃಷ್ಟಿಕೋನದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವೈಫಲ್ಯಕ್ಕೊಳಗಾಗಿದೆ. ಭಾರತೀಯ ಸಂವಿಧಾನದಿಂದ ನೀಡಿರುವ ಜೀವ, ಸ್ವಾತಂತ್ಯ್ಯ, ಘನತೆಯನ್ನು ಕಿತ್ತುಕೊಳ್ಳಲು ಆಗುವುದಿಲ್ಲ. ಈ ವಿಚಾರದ ಬಗ್ಗೆ ಪುನರ್ ಪರಿಶೀಲಿಸುವಂತೆ ಅವರು ಮುಖ್ಯ ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com