ಬೇಟಿ ಬಚಾವೊ-ಬೇಟಿ ಪಡಾವೊ': ಉತ್ತಮ ಸಾಧನೆ ತೋರಿದ ಗದಗಕ್ಕೆ ಪ್ರಶಸ್ತಿಯ ಗರಿ

ಬೇಟಿ ಬಚಾವೊ-ಬೇಟಿ ಪಡಾವೊ ಅಭಿಯಾನದಲ್ಲಿ ಉತ್ತಮ ಸಾಧನೆ ತೋರಿದ ಗದಗ ಜಿಲ್ಲೆಗೆ ಪ್ರಶಸ್ತಿಯ ಗರಿ ಮೂಡಿದೆ.ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ, ಕಳೆದ ಐದು ವರ್ಷಗಳಲ್ಲಿ ಲಿಂಗಾನುಪಾತ ಸುಧಾರಿಸಿದ ಐದು ರಾಜ್ಯಗಳು ಮತ್ತು 10 ಜಿಲ್ಲೆಗಳಿಗೆ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿದರು.  
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ನವದೆಹಲಿ: ಬೇಟಿ ಬಚಾವೊ-ಬೇಟಿ ಪಡಾವೊ ಅಭಿಯಾನದಲ್ಲಿ ಉತ್ತಮ ಸಾಧನೆ ತೋರಿದ ಗದಗ ಜಿಲ್ಲೆಗೆ ಪ್ರಶಸ್ತಿಯ ಗರಿ ಮೂಡಿದೆ.ಬೇಟಿ ಬಚಾವೊ- ಬೇಟಿ ಪಡಾವೊ' ಯೋಜನೆ ಯಶಸ್ಸು ಆಚರಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ, ಕಳೆದ ಐದು ವರ್ಷಗಳಲ್ಲಿ ಲಿಂಗಾನುಪಾತ ಸುಧಾರಿಸಿದ ಐದು ರಾಜ್ಯಗಳು ಮತ್ತು 10 ಜಿಲ್ಲೆಗಳಿಗೆ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿದರು.  

ಇದಲ್ಲದೆ, ಜನಸಾಮಾನ್ಯರಲ್ಲಿ ಈ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ಶ್ಲಾಘನೀಯ ಕಾರ್ಯ ಮೆಚ್ಚಿ  ಹರಿಯಾಣ, ಉತ್ತರಾಖಂಡ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶ  ರಾಜ್ಯಗಳು ಹಾಗೂ 10 ಜಿಲ್ಲೆಗಳನ್ನು ಸಚಿವರು ಸನ್ಮಾನಿಸಿದರು. 

ಈ ಯೋಜನೆ ಬಗ್ಗೆ ಪರಿಣಾಮಕಾರಿ ಜಾಗೃತಿ ಮೂಡಿಸಿದ ಜಿಲ್ಲೆಗಳ ಪೈಕಿ, ಕರ್ನಾಟಕದ ಗದಗ, ತಮಿಳುನಾಡಿನ ತಿರುವಳ್ಳೂರ್,  ಗುಜರಾತ್‌ನ ಅಹಮದಾಬಾದ್, ಹಿಮಾಚಲ ಪ್ರದೇಶದ ಮಂಡಿ, ಜಮ್ಮು ಮತ್ತು ಕಾಶ್ಮೀರದ  ಕಿಶತ್‌ವಾರ್, , ಹಿಮಾಚಲ ಪ್ರದೇಶದ ಶಿಮ್ಲಾ, ನಾಗಾಲ್ಯಾಂಡ್‌ನ ವೊಖಾ, ಹಿಮಾಚಲ ಪ್ರದೇಶದ ಸಿರ್‌ಮೌರ್‌ ಮತ್ತು ರಾಜಸ್ಥಾನದ ನಾಗೌರ್‌ ಸೇರಿವೆ.

ಈ  ಸಂದರ್ಭದಲ್ಲಿ  ಮಾತನಾಡಿದ ಸ್ಮೃತಿ ಇರಾನಿ, ಅರುಣಾಚಲ ಪ್ರದೇಶದ ಪೂರ್ವ ಕಾಮಂಗ್ ನ ಅತ್ಯುತ್ತಮ  ಸಾಧನೆಯನ್ನು ಶ್ಲಾಘಿಸಿದ ಅವರು, ಈ ಪ್ರದೇಶ ಲಿಂಗಾನುಪಾತದಲ್ಲಿ ಗಮನಾರ್ಹ ಬದಲಾವಣೆ  ತೋರಿದ್ದು, 2014-15ರಲ್ಲಿ 1000 ಗಂಡು ಮಕ್ಕಳಿಗೆ  807 ಹೆಣ್ಣುಮಕ್ಕಳಿದ್ದರೆ, ಈಗ   1000 ಗಂಡು ಮಕ್ಕಳಿಗೆ 1039 ಹೆಣ್ಣು ಮಕ್ಕಳಿದ್ದಾರೆ ಎಂದರು. 

ಮಹಿಳಾ  ಮತ್ತು ಮಕ್ಕಳ  ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರವೀಂದರ್ ಪೊವಾರ್ ಮಾತನಾಡಿ, ' ಲಿಂಗಾನುಪಾತ  ಕಡಿಮೆಯಾಗುತ್ತಿರುವುದು ಸರ್ಕಾರಕ್ಕೆ ಕಳವಳಕಾರಿ ವಿಷಯವಾಗಿದೆ. ಹುಟ್ಟುವುದರಿಂದ ಹಿಡಿದು  ಹೆಣ್ಣು ಮಗು ಘನತೆಯಿಂದ ಬದುಕು ನಡೆಸುವ  ಹಕ್ಕುಗಳನ್ನು ಸಂರಕ್ಷಿಸುವುದು ಬೇಟಿ ಬಚಾವೊ- ಬೇಟಿ ಪಡಾವೊ ಯೋಜನೆಯ ಗುರಿಯಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಅವರನ್ನು ಸಶಕ್ತಗೊಳಿಸುವುದು ಮುಖ್ಯ ಗುರಿಯಾಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com