ದೇಶದ ಮೊದಲ ಖಾಸಗಿ ರೈಲು ತೇಜಸ್ ದೆಹಲಿ-ಲಕ್ನೋ ನಡುವೆ ಸಂಚಾರಕ್ಕೆ ಸಿದ್ದ

ದೇಶದ ಮೊದಲ ಖಾಸಗಿ ತೇಜಸ್ ರೈಲು ದೆಹಲಿ ಮತ್ತು ಲಕ್ನೋ ನಡುವೆ ಹಬ್ಬಗಳ ಸಾಲು ನವರಾತ್ರಿಯ ಸಮಯದಲ್ಲಿ ಅಂದರೆ ಅಕ್ಟೋಬರ್ 4 ರಿಂದ ಸಂಚಾರ ಮಾಡಲು ಸಿದ್ದವಾಗಿದೆ.

Published: 06th September 2019 04:36 PM  |   Last Updated: 06th September 2019 04:43 PM   |  A+A-


India's first private train will run on tracks from October 4

ದೇಶದ ಮೊದಲ ಖಾಸಗಿ ರೈಲು ತೇಜಸ್ ದೆಹಲಿ-ಲಕ್ನೋ ನಡುವೆ ಸಂಚಾರಕ್ಕೆ ಸಿದ್ದ

Posted By : Srinivas Rao BV
Source : Online Desk

ಲಕ್ನೋ: ದೇಶದ ಮೊದಲ ಖಾಸಗಿ ತೇಜಸ್ ರೈಲು ದೆಹಲಿ ಮತ್ತು ಲಕ್ನೋ ನಡುವೆ ಹಬ್ಬಗಳ ಸಾಲು ನವರಾತ್ರಿಯ ಸಮಯದಲ್ಲಿ ಅಂದರೆ ಅಕ್ಟೋಬರ್ 4 ರಿಂದ ಸಂಚಾರ ಮಾಡಲು ಸಿದ್ದವಾಗಿದೆ. ಐಆರ್‌ಸಿಟಿಸಿ ನಿರ್ವಹಿಸಲಿರುವ ಹೈಸ್ಪೀಡ್ ರೈಲು ಲಕ್ನೋ ಜಂಕ್ಷನ್‌ನ ಪ್ಲಾಟ್‌ಫಾರ್ಮ್ 6 ರಿಂದ ಹೊರಡಲಿದೆ ಎಂದು ಐಆರ್‌ಸಿಟಿಸಿಯ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಶ್ವಿನಿ ಶ್ರೀವಾಸ್ತವ ಶುಕ್ರವಾರ ತಿಳಿಸಿದ್ದಾರೆ.
      
ನಾವು ರೈಲ್ವೆ ಮಂಡಳಿಗೆ ವಿವರ ಕಳುಹಿಸಿದ್ದೇವೆ ಮತ್ತು ಅವರು ರೈಲಿನ ಉದ್ಘಾಟನಾ ದಿನವನ್ನು ಅವರು ಇಲಾಖೆ ನಿರ್ಧರಿಸಲಿದ್ದು, ಬಹುತೇಕ ನವರಾತ್ರಿ ಸಮಯದಲ್ಲಿ ಮುಂದಿನ ತಿಂಗಳ 4 ರಿಂದ ಸಂಚಾರ ಆರಂಭಿಸಲಿದೆ ಎಂದು ಅವರು ಹೇಳಿದರು. 
    
ಈಶಾನ್ಯ ರೈಲ್ವೆಯ ಲಖನೌ ವಿಭಾಗದಿಂದ ಲಕ್ನೋ ಮತ್ತು ದೆಹಲಿ ನಡುವಿನ ತೇಜಸ್ ಸಂಚಾರಕ್ಕಾಗಿ ಐಆರ್ಸಿಟಿಸಿ ಪ್ಲಾಟ್‌ಫಾರ್ಮ್ ಸಂಖ್ಯೆ 6 ಅನ್ನು ನೀಡುವಂತೆ ಕೋರಲಾಗಿದ್ದು, ಇದಕ್ಕೆ ಬಹುತೇಕ ಒಪ್ಪಿಗೆ ದೊರಕಲಿದೆ ಎನ್ನಲಾಗಿದೆ. 
  
ರೈಲು ಲಕ್ನೋ ಜಂಕ್ಷನ್‌ನಿಂದ ಪ್ರತಿದಿನ 0610 ಗಂಟೆಗೆ ಹೊರಡಲಿದೆ. ಮತ್ತೆ  ನವದೆಹಲಿ ರೈಲ್ವೆ ನಿಲ್ದಾಣದಿಂದ 1630 ಗಂಟೆಗೆ ವಾಪಸ್ ಹೊರಡಲಿದೆ. ಟಿಕೆಟಿಂಗ್ ಮೇಲ್ವಿಚಾರಣೆಗೆ ಐಆರ್ಸಿಟಿಸಿ ರೈಲ್ವೆ ನಿಲ್ದಾಣಗಳಲ್ಲಿ ಪ್ರತ್ಯೇಕ ಟಿಕೆಟ್ ಕೌಂಟರ್ ತರೆಯಲು ಅಲೋಚನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಟಿಕೆಟ್‌ಗಳನ್ನು ಸಹ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ 15 ದಿನಗಳ ಮೊದಲು ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ತೇಜಸ್ ಎಕ್ಸ್‌ಪ್ರೆಸ್ ಎಲ್ಲ ಹವಾನಿಯಂತ್ರಿತವಾಗಿದ್ದು  ಶತಾಬ್ದಿ ಎಕ್ಸ್‌ಪ್ರೆಸ್‌ನ ಮತ್ತು  ಐಷಾರಾಮಿ ರೈಲಿನ ಎಲ್ಲ ಸೌಲಭ್ಯ ಒಳಗೊಂಡಿದೆ. ಬಯೋ-ಟಾಯ್ಲೆಟ್ ಮತ್ತು ಪ್ರವೇಶ,ನಿರ್ಗಮನಕ್ಕಾಗಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲು ಅಳವಡಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು, ಎಲ್‌ಇಡಿ ಟಿವಿಗಳು,ನಿಯತಕಾಲಿಕೆ ಇನ್ನಿತರೆ ಹಲವು ಸೌಲಭ್ಯಗಳು ಇದರಲ್ಲಿ ಸೇರಿವೆ ಎಂದೂ ಮೂಲಗಳು ತಿಳಿಸಿವೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp