ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್ ನಿಧನ

ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್  ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಬಳಲುತ್ತಿದ್ದ ನಗರ್ಕರ್ ಅವರನ್ನು ಬಾಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ  ಅವರು ಕೊನೆಯುಸಿರೆಳೆದಿದ್ದಾರೆ.
ಕಿರಣ್ ನಗರ್ಕರ್
ಕಿರಣ್ ನಗರ್ಕರ್

ಮುಂಬೈ:  ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್  ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ನಗರ್ಕರ್ ಅವರನ್ನು ಬಾಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ  ಅವರು ಕೊನೆಯುಸಿರೆಳೆದಿದ್ದಾರೆ.

ರಾವಣ್ ಮತ್ತು ಎಡ್ಡಿ, ಕೋಕೋಲ್ಡ್ ಮತ್ತಿತರ ಕಾದಂಬರಿಗಳನ್ನು ನಗರ್ಕರ್ ರಚಿಸಿದ್ದರು. ಗಾಡ್ಸ್  ಲಿಟ್ಲ್ ಸೊಲ್ಡರ್ , ದಿ ಎಕ್ಸಾಟ್ರಾ ಮತ್ತು ರೆಸ್ಟ್ ಇನ್ ಪೀಸ್  ಕೃತಿಗಳನ್ನು ರಚಿಸಿದ್ದರು. 1974ರಲ್ಲಿ ಅವರ ಮೊದಲ ಮರಾಠಿ ಕಾದಂಬರಿ ಪ್ರಕಟಗೊಂಡಿತ್ತು. 

ಮರಾಠಿ ಅಲ್ಲದೇ ಇಂಗ್ಲೀಷ್ ನಲ್ಲಿ ಏಳು ಕಾದಂಬರಿಗಳನ್ನು ರಚಿಸಿದ್ದ ನಗರ್ಕರ್ ಅವರ ಅವರ ಆರ್ಸನಿಸ್ಟ್ ಕಾದಂಬರಿ 2019ರಲ್ಲಿ ಪ್ರಕಟಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com