ಮಹಿಳೆಯರಿಗೆ ಮೆಟ್ರೋ ಪ್ರಯಾಣ ಉಚಿತ ಎಂದಿದ್ದ ದೆಹಲಿ ಸಿಎಂಗೆ 'ಸುಪ್ರೀಂ' ಚಾಟಿ

ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಅಧಿಕಾರದ ಗದ್ದುಗೆ ಉಳಿಸಿಕೊಳ್ಳುವ ಸಲುವಾಗಿ ಜನಪ್ರಿಯ ಯೋಜನೆಗಳ ಮೊರೆ ಹೋಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಚಾಟಿ ಬೀಸಿದೆ. 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಅಧಿಕಾರದ ಗದ್ದುಗೆ ಉಳಿಸಿಕೊಳ್ಳುವ ಸಲುವಾಗಿ ಜನಪ್ರಿಯ ಯೋಜನೆಗಳ ಮೊರೆ ಹೋಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಚಾಟಿ ಬೀಸಿದೆ. 

ಮಹಿಳೆಯರಿಗೆ ಮೆಟ್ರೋ ಪ್ರಯಾಣ ಉಚಿತ ಎಂದು ಈ ಹಿಂದೆ ಕೇಜ್ರಿವಾಲ್ ಅವರು ಹೇಳಿದ್ದರು.ಈ ಬಗ್ಗೆ ಶುಕ್ರವಾರ ನ್ಯಾ.ಅರುಣ್ ಮಿಶ್ರಾ ಹಾಗೂ ನ್ಯಾ.ದೀಪಕ್ ಗುಪ್ತ ಇದ್ದ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. 

ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದರಿಂದ ಮೆಟ್ರೋ ರೈಲು ನಿಗಮ ನಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ.

ನೀವು ಉಚಿತ ಪ್ರಯಾಣದ ಕೊಡುಗೆ ನೀಡಲು ಮುಂದಾದರೆ, ಅದನ್ನು ತಡೆಯುತ್ತೇವೆ. ಸಾರ್ವಜನಿಕ ತೆರಿಗೆ ಹಣಕ್ಕೆ ನಷ್ಟವನ್ನುಂಟು ಮಾಡಲು ಬಯಸುತ್ತಿದ್ದೀರಿ. ಓಲೈಕೆಗಾಗಿ ಉಚಿತ ಕೊಡುಗೆ ನೀಡಿ ಅದರ ವೆಚ್ಚವನ್ನು ದೇಶದ ಮೇಲೆ ಹೇರಿದೆ ಹೇಗೆ? ಎಂದು ಪ್ರಶ್ನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com