ಸಾಫ್ಟ್ ಲ್ಯಾಂಡಿಂಗ್ ಬಿಟ್ಟರೆ ಎಲ್ಲವನ್ನೂ ಸಾಧಿಸಿದ್ದೇವೆ, ಚಂದ್ರಯಾನ-3 ಅಗತ್ಯವಿಲ್ಲ: ಖ್ಯಾತ ವಿಜ್ಞಾನಿ

ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಬಿಟ್ಟರೆ ಎಲ್ಲವನ್ನೂ ಸಾಧಿಸಿದ್ದೇವೆ, ಚಂದ್ರಯಾನ-3 ಅಗತ್ಯವಿಲ್ಲ ಎಂದು ಭಾರತದ ಖ್ಯಾತ ವಿಜ್ಞಾನಿ ನಂಬಿ ನಾರಾಯಣ್ ಅವರು ಹೇಳಿದ್ದಾರೆ. 
ಚಂದ್ರಯಾನ-2 ಆರ್ಟಿಬಿಟರ್
ಚಂದ್ರಯಾನ-2 ಆರ್ಟಿಬಿಟರ್

ನವದೆಹಲಿ: ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಬಿಟ್ಟರೆ ಎಲ್ಲವನ್ನೂ ಸಾಧಿಸಿದ್ದೇವೆ, ಚಂದ್ರಯಾನ-3 ಅಗತ್ಯವಿಲ್ಲ ಎಂದು ಭಾರತದ ಖ್ಯಾತ ವಿಜ್ಞಾನಿ ನಂಬಿ ನಾರಾಯಣ್ ಅವರು ಹೇಳಿದ್ದಾರೆ. 

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ನೌಕೆ ಇಳಿಸಿ, ಬಾಹ್ಯಾಕಾಶ ಲೋಕದಲ್ಲಿ ಹೊಸ ಇತಿಹಾಸ ಬರೆಯುವ ಭಾರತದ ಪ್ರಯತ್ನಕ್ಕೆ ಶುಕ್ರವಾರ ತಡರಾತ್ರಿ ಹಿನ್ನಡೆಯಾಗಿದೆ. ಭೂಮಿಯಿಂದ 3.84 ಲಕ್ಷ ಕಿ.ಮೀ ದೂರದ ಚಂದ್ರನಲ್ಲಿಗೆ ಬಹುತೇಕ ತಲುಪಿದ್ದ ಚಂದ್ರಯಾನ-2 ನೌಕೆಯಲ್ಲಿನ ವಿಕ್ರಮ್ ಲ್ಯಾಂಡರ್ ಕೇವಲ 2.1 ಕಿಮೀ ಹಾಗೂ ಕೆಲವೇ ಸೆಕೆಂಡುಗಳ ದೂರದಲ್ಲಿರುವಾಗ ನಿಗೂಢ ರೀತಿಯಲ್ಲಿ ಸಂಪರ್ಕ ಕಳೆದುಕೊಂಡಿದೆ. 

ಚಂದ್ರನ ಮೇಲೆ ಭಾರತ ಕೀರ್ತಿ ಪತಾಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಹಾರಿಸುವುದನ್ನು ನೋಡಲು ನಿದ್ರೆಯನ್ನು ಮರೆತು, ಟಿವಿಗಳ ಮುಂದೆ ಕಣ್ಣು ಮಿಟುಕಿಸದೇ ಕುಳಿತಿದ್ದ ಕೋಟ್ಯಾಂತರ ಭಾರತೀಯರು ಹಾಗೂ ಜಗತ್ತಿನ ಬಾಹ್ಯಾಕಾಶ ಆಸಕ್ತರಿಗೆ ಇದರಿಂದ ತೀವ್ರ ರೀತಿಯ ನಿರಾಶೆಯಾಗಿದೆ. 

ಚಂದ್ರಯಾನ-2 ಹಿನ್ನಡೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಖ್ಯಾತ ವಿಜ್ಞಾನಿ ನಂಬಿ ನಾರಾಯಣ್ ಅವರು, ಚಂದ್ರಯಾನ-2 ಮಿಷನ್ ನನ್ನು ಹಲವು ಆಯಾಮಗಳಿಂದ ನೋಡಬೇಕಾಗುತ್ತದೆ. ಲ್ಯಾಂಡರ್ ಜೊತೆಗಿನ ಸಂಪರ್ಕ ಕಡಿತಕ್ಕೆ ಸಾಫ್ಟ್ ವೇರ್ ಕೂಡ ಕಾರಣವಾಗಿರಬಹುದು. ಒಂದು ವೇಳೆ ಅದೇ ನಿಜವಾಗಿದ್ದರೆ, ಅದು ಹೇಗಾಯಿತು? ಎಂಬುದನ್ನು ಆಲೋಚಿಸಬೇಕು. 

ಸೆನ್ಸಾರ್ ಗಳು ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಹೊಂದಿರುತ್ತದೆ. ಆಟೋಮೆಟಿಕ್ ಲ್ಯಾಂಡಿಗ್ ಅನುಕ್ರಮಗಳನ್ನು ಇಲ್ಲಿ ಬಳಸಲಾಗಿರುತ್ತದೆ. ಶೇಕಡಾವಾರುಗಳಲ್ಲಿ ಕಾರ್ಯಾಚರಣೆಯ ಯಶಸ್ಸನ್ನು ನಾವು ಅಳೆಯಲು ಸಾಧ್ಯವಾಗುವುದಿಲ್ಲ. ಚಂದ್ರಯಾನ-1ರಲ್ಲಿ ಯಾವುದೇ ರೀತಿಯ ಸಾಫ್ಟ್ ಲ್ಯಾಂಡಿಂಗ್ ಇರಲಿಲ್ಲ. ಆಧರೆ, ಈ ಬಾರಿ ಸಾಫ್ಟ್ ಲ್ಯಾಂಡಿಂಗ್ ಇತ್ತು. ಹೀಗಾಗಿಯೇ ಇದು ಅತ್ಯಂತ ನಿರ್ಣಾಯಕ ಕಾರ್ಯಾಚರಣೆಯಾಗಿತ್ತು. ಇದೀಗ ಸಾಫ್ಟ್ ಲ್ಯಾಂಡಿಂಗ್ ಆಗದ ಕಾರಣ ರೋವರ್ ಕಾರ್ಯಾಚರಣೆ ಹಾಗೂ ಅದರ ಉಳಿವಿನ ಬಗ್ಗೆ ನಮಗೂ ತಿಳಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಇಡೀ ಕಾರ್ಯಾಚರಣೆಯೇ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. 

ಸಾಫ್ಟ್ ಲ್ಯಾಂಡಿಂಗ್ ಬಿಟ್ಟರೆ ಎಲ್ಲವನ್ನೂ ಸಾಧಿಸಿದ್ದೇವೆ. ಚಂದ್ರನ ಅಂಗಳದಲ್ಲಿ ಈಗಲೂ ಆರ್ಟಿಟರ್ ಇದೆ. ಇತರೆ ಕಾರ್ಯಾಚರಣೆಗಳು ಈಗಲೂ ಚಂದ್ರನ ಅಂಗಳದಲ್ಲಿ ನಡೆಯುತ್ತಿವೆ. ಚಂದ್ರಯಾನ-3 ಅಗತ್ಯವಿಲ್ಲ. ಪ್ರತೀ ಚಂದ್ರಯಾನಕ್ಕೂ ಅತೀ ಹೆಚ್ಚು ಹಣವನ್ನು ವ್ಯಯ ಮಾಡಬೇಕಾಗುತ್ತದೆ. ಮತ್ತೊಂದು ಕಾರ್ಯಾಚರಣೆ ಆರಂಭ ಮಾಡುವುದಕ್ಕೂ ಮುನ್ನ ನಾವು ಚಂದ್ರಯಾನ-2ರಲ್ಲಿ ಸಾಫ್ಟ್ ಲ್ಯಾಂಡಿಂಗ್ ಏಕೆ ಆಗಲಿಲ್ಲ ಎಂಬುದನ್ನು ಮೊದಲು ಕಂಡು ಹಿಡಿಯಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com