ಇಸ್ರೋ,ಕ್ರೀಡಾಪಟುಗಳಿಗೆ ವೈಫಲ್ಯದಂತಹ ವಿಷಯಗಳಿಲ್ಲ- ಪ್ರಧಾನಿ ಮೋದಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಹಾಗೂ ದೇಶದಲ್ಲಿನ ಕ್ರೀಡಾಪಟುಗಳಿಗೆ ವೈಫಲ್ಯದಂತಹ ವಿಷಯಗಳಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಇವರಿಬ್ಬರ ಶ್ರಮವನ್ನು ಹೊಗಳಿದ್ದಾರೆ.
Published: 08th September 2019 11:11 AM | Last Updated: 08th September 2019 11:14 AM | A+A A-

ನರೇಂದ್ರ ಮೋದಿ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಹಾಗೂ ದೇಶದಲ್ಲಿನ ಕ್ರೀಡಾಪಟುಗಳಿಗೆ ವೈಫಲ್ಯದಂತಹ ವಿಷಯಗಳಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಇವರಿಬ್ಬರ ಶ್ರಮವನ್ನು ಹೊಗಳಿದ್ದಾರೆ.
ಚಂದ್ರಯಾನ-2 ಯೋಜನೆಯಲ್ಲಿ ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಹೊಗಳಿ ಟೆನ್ನಿಸ್ ಸ್ಟಾರ್ ಮಹೇಶ್ ಭೂಪತಿ ಅವರ ಟ್ವೀಟ್ ಗೆ ರೀ ಟ್ವಿಟ್ ಮಾಡಿರುವ ಪ್ರಧಾನಿ,ಇಸ್ರೋ ಹಾಗೂ ಕ್ರೀಡಾಪಟುಗಳಿಗೆ ವಿಫಲತೆ ಎಂಬುದು ಇಲ್ಲ. ಕಲಿಕೆ ಮಾತ್ರ ಇರುತ್ತದೆ ಎಂದು ಹೇಳಿದ್ದಾರೆ.ಇಸ್ರೋ ಪ್ರಯತ್ನಕ್ಕೆ ಮುಂದೆ ಸಫಲತೆ ದೊರೆಯಲಿದೆ ಎಂಬರ್ಥದಲ್ಲಿ ಮಹೇಶ್ ಭೂಪತಿ ಶನಿವಾರ ಟ್ವೀಟ್ ಮಾಡಿದ್ದರು.
For champions like @isro and our sportspersons, there is no such thing as failure. There is only learning. https://t.co/NMn4NNtJek
— Narendra Modi (@narendramodi) September 8, 2019
ಬಾಹ್ಯಾಕಾಶ ಲೋಕದಲ್ಲಿ ಹೊಸ ಚಾರಿತ್ರಿಕ ಬರೆಯುವ ಭಾರತದ ಪ್ರಯತ್ನಕ್ಕೆ ಶುಕ್ರವಾರ ತಡರಾತ್ರಿ ಹಿನ್ನಡೆಯಾಗಿತ್ತು. ಭೂಮಿಯಿಂದ 3.84 ಲಕ್ಷ ಕಿ.ಮೀ ದೂರದ ಚಂದ್ರನಲ್ಲಿಗೆ ಬಹುತೇಕ ತಲುಪಿದ್ದ ಚಂದ್ರಯಾನ-2 ನೌಕೆಯಲ್ಲಿನ ವಿಕ್ರಮ್ ಲ್ಯಾಂಡರ್ ಕೇವಲ 2.1 ಕಿಮೀ ಹಾಗೂ ಕೆಲವೇ ಸೆಕೆಂಡುಗಳ ದೂರದಲ್ಲಿರುವಾಗ ನಿಗೂಢ ರೀತಿಯಲ್ಲಿ ಸಂಪರ್ಕ ಕಳೆದುಕೊಂಡಿದೆ.