ಪ್ರಿಯಕರನ ಜೊತೆ ಸೊಸೆಯ ರಾಸಲೀಲೆ ಕಂಡ ಅತ್ತೆ ತಪ್ಪಿಸಿಕೊಳ್ಳದಂತೆ ರೂಂ ಲಾಕ್: ಬಾಗಿಲು ತೆರೆದು ನೋಡಿ ದಂಗಾದ್ರು!

ಗಂಡ ವಿದೇಶಕ್ಕೆ ಹಿಂದಿರುಗಿದ ನಂತರ ತನ್ನ ಪ್ರಿಯಕರ ನನ್ನು ಮನೆಗೆ ಕರೆಸಿಕೊಂಡಿದ್ದ ಸೊಸೆಯನ್ನು ಕಂಡ ಅತ್ತೆ ಅವರಿಬ್ಬರಿದ್ದ ರೂಂ ಅನ್ನು ಲಾಕ್ ಮಾಡಿದ್ದರು. ನಂತರ ರೂಂನ ಒಳ ಹೊಕ್ಕಾಗ ಕಂಡಿದ್ದೆ ಬೇರೆಯಾಗಿತ್ತು.

Published: 08th September 2019 01:16 PM  |   Last Updated: 08th September 2019 01:54 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಚೆನ್ನೈ: ಗಂಡ ವಿದೇಶಕ್ಕೆ ಹಿಂದಿರುಗಿದ ನಂತರ ತನ್ನ ಪ್ರಿಯಕರ ನನ್ನು ಮನೆಗೆ ಕರೆಸಿಕೊಂಡಿದ್ದ ಸೊಸೆಯನ್ನು ಕಂಡ ಅತ್ತೆ ಅವರಿಬ್ಬರಿದ್ದ ರೂಂ ಅನ್ನು ಲಾಕ್ ಮಾಡಿದ್ದರು. ನಂತರ ರೂಂನ ಒಳ ಹೊಕ್ಕಾಗ ಕಂಡಿದ್ದೆ ಬೇರೆಯಾಗಿತ್ತು. 

ತಾವಿದ್ದ ರೂಂಅನ್ನು ಲಾಕ್ ಮಾಡಲಾಗಿದೆ ಎಂದು ತಿಳಿದ ಪ್ರಿಯಕರ ಹಾಗೂ ಸೊಸೆ  ಮನೆಯ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. 

ತಮಿಳುನಾಡಿನ ತಿರುಮಾಯಂನಲ್ಲಿ ಈ ಘಟನೆ ನಡೆದಿದ್ದು 32 ವರ್ಷದ ಸುಲೋಚನಾ ಎಂಬುವರು ವ್ಯಕ್ತಿಯೋರ್ವನನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಸಿಂಗಾಪುರದಲ್ಲಿ ಗಂಡ ಕೆಲಸ ಮಾಡಿಕೊಂಡಿದ್ದು ಕಳೆದ ಮೂರು ತಿಂಗಳ ಹಿಂದೆ ಮನೆಗೆ ಬಂದಿದ್ದ ಗಂಡ ಹೆಂಡತಿಗಾಗಿ ಹೊಸ ಮನೆಯೊಂದನ್ನು ಮಾಡಿಕೊಟ್ಟು ವಿದೇಶಕ್ಕೆ ಮರಳಿದ್ದರು. 

ಇನ್ನು ಸುಲೋಚನ ಮಾಣಿಕ್ಯ ಎಂಬುವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಮಾಣಿಕ್ಯ ಪ್ರತಿದಿನ ರಾತ್ರಿ ಸುಲೋಚನ ಮನೆಗೆ ಬರುತ್ತಿದ್ದನು. ಇದನ್ನು ಗಮನಿಸಿ ಸುಲೋಚನ ಅತ್ತೆ ಮಾಣಿಕ್ಯ ಸುಲೋಚನ ಜೊತೆ ಇದ್ದಾಗ ಮನೆಯ ಬಾಗಿಲನ್ನು ಲಾಕ್ ಮಾಡಿದ್ದರು. ನೆರೆ ಹೊರೆಯವರನ್ನು ಕರೆದುಕೊಂಡು ಬರುವಷ್ಟರಲ್ಲಿ ಇಬ್ಬರು ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp