ಸೋನಿಯಾ ಅಧ್ಯಕ್ಷರಾಗಿ ಒಂದು ತಿಂಗಳು ಕಳೆದರೂ ಚೈತನ್ಯ ಕಾಣದ ಕಾಂಗ್ರೆಸ್ 

ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆದರೂ  ಲೋಕಸಭಾ ಚುನಾವಣೆ ಹೀನಾಯ ಸೋಲಿನಿಂದ ವರ್ಚಸ್ಸು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ಚೈತನ್ಯ ಕಾಣುತ್ತಿಲ್ಲ.
ಸೋನಿಯಾಗಾಂಧಿ
ಸೋನಿಯಾಗಾಂಧಿ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆದರೂ  ಲೋಕಸಭಾ ಚುನಾವಣೆ ಹೀನಾಯ ಸೋಲಿನಿಂದ ವರ್ಚಸ್ಸು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ಚೈತನ್ಯ ಕಾಣುತ್ತಿಲ್ಲ.

ಪಕ್ಷದಲ್ಲಿ ಸೂಕ್ತ ನಾಯಕತ್ವ ಹುಡುಕಾಟದಲ್ಲಿ ವಿಫಲತೆಯಿಂದಾಗಿ ಆಗಸ್ಟ್ 10 ರಂದು ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ಒಂದು ತಿಂಗಳ ಅವಧಿಯಲ್ಲಿ  ಚುನಾವಣೆ ನಡೆಯಲಿರುವ ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ರಾಜ್ಯಗಳಿಗೆ ಸಂಬಂಧಿಸಿದ ನೇಮಕವನ್ನು ವಿಳಂಬವಿಲ್ಲದೆ ಮಾಡಿದ್ದಾರೆ. ಆದರೆ, ಪ್ರಮುಖ ಸುಧಾರಣಾ ಕ್ರಮಗಳಿಂದ ದೂರ ಉಳಿದಿದ್ದಾರೆ.

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕಾಗಿದೆ. ಈಗ ಮಧ್ಯಪ್ರದೇಶದ ನಂತರ ರಾಜಸ್ತಾನದ ಸಮಸ್ಯೆಗಳತ್ತ ಗಮನಹರಿಸಬೇಕಾಗಿದೆ. ಎಐಸಿಸಿ ಪುನಾರಚನೆ ಹಾಗೂ ರಾಜ್ಯದ ಮುಖ್ಯಸ್ಥರ ನೇಮಕವನ್ನು ಮಾಡಬೇಕಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನವನ್ನು ತೊರೆದ ಬಳಿಕ ಪಕ್ಷದ ವ್ಯವಹಾರವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಲು ಸೋನಿಯಾ ಈಗಲೂ ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿಗಿನ ಕೆಲವೊಂದು ನೇಮಕಗಳು ಹಳೆಯ ಹಾಗೂ ಯುವ ನಾಯಕರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂಬುದು ಹಿರಿಯ ಮುಖಂಡರೊಬ್ಬರಿಂದ ತಿಳಿದುಬಂದಿದೆ.

ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂದಿಯಾ, ಮಹಾರಾಷ್ಟ್ರದಲ್ಲಿ ಬಾಳಸಾಹೇಬ್ ಥೋರಟ್  ಮತ್ತಿತರ ನಾಯಕತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳಿವೆ. ಉತ್ತರ ಪ್ರದೇಶದಲ್ಲಿ 13 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಆದರೆ, ಈವರೆಗೂ ಜಿಲ್ಲಾಧ್ಯಕ್ಷರ ನೇಮಕವಾಗಿಲ್ಲ.

ಜಾರ್ಖಂಡ್ ನಲ್ಲಿ ಅಜೊಯ್ ಕುಮಾರ್  ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಮೇಶ್ವರ್ ಒರಾನ್ ಅವರನ್ನು ನೇಮಕ ಮಾಡಲಾಗಿದೆ. ಆದರೆ, ಅವರಿಗೆ ವಯಸ್ಸಾಗಿದೆ. ಹೀಗೆ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳಿಗೆ ಇನ್ನೂ ಪರಿಹಾರ ಸಿಗದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com