ಕಮಲ್ ನಾಥ್ ವಿರುದ್ಧದ1984ರ ಸಿಖ್ ವಿರೋಧಿ ಗಲಭೆ ಪ್ರಕರಣಗಳಿಗೆ ಗೃಹ ಸಚಿವಾಲಯದಿಂದ ಮರು ಜೀವ!

ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, 1984 ರ ಸಿಖ್ ವಿರೋಧಿ ಗಲಭೆ ಪ್ರಕರಣಗಳಿಗೆ ಗೃಹ ಸಚಿವಾಲಯ ಮರು ಜೀವ ನೀಡಿದೆ. 
ಕಮಲ್ ನಾಥ್
ಕಮಲ್ ನಾಥ್

ನವದೆಹಲಿ: ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, 1984 ರ ಸಿಖ್ ವಿರೋಧಿ ಗಲಭೆ ಪ್ರಕರಣಗಳಿಗೆ ಗೃಹ ಸಚಿವಾಲಯ ಮರು ಜೀವ ನೀಡಿದೆ. 

ಕಮಲ್ ನಾಥ್ ವಿರುದ್ಧದ ಪ್ರಕರಣಗಳ ಮರು ತನಿಖೆಗೆ ಗೃಹ ಇಲಾಖೆ ಒಪ್ಪಿಗೆ ನೀಡಿರುವುದನ್ನು ಶಿರೋಮಣಿ ಅಕಾಲಿ ದಳದ ದೆಹಲಿ ಶಾಸಕ ಮನ್ಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. 

ಸಿಖ್ ನರಮೇಧದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಕಮಲ್ ನಾಥ್ ವಿರುದ್ಧದ ಪ್ರಕರಣಗಳನ್ನು ಮರು ತನಿಖೆ ನಡೆಸಲು ವಿಶೇಷ ತನಿಖಾ ತಂಡ ಒಪ್ಪಿಗೆ ಸೂಚಿಸಿರುವುದು ಅಕಾಲಿ ದಳಕ್ಕೆ ದೊರೆತ ದೊಡ್ಡ ಗೆಲುವು ಎಂದು ಮನ್ಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. 

ಪ್ರಕರಣ ಸಂಖ್ಯೆ 601/84 ನ್ನು ಮರು ತನಿಖೆಗೆ ಒಳಪಡಿಸಬೇಕು, ಕಮಲ್ ನಾಥ್ ವಿರುದ್ಧದ ಹೊಸ ಸಾಕ್ಷ್ಯಗಳನ್ನು ಪರಿಗಣಿಸಬೇಕೆಂದು ಕಳೆದ ವರ್ಷ ಮನವಿ ಮಾಡಿದ್ದಾಗಿ ಸಿರ್ಸಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಕಮಲ್ ನಾಥ್ ಸಿಖ್ ಸಮುದಾಯದವರನ್ನು ಹತ್ಯೆ ಮಾಡಿರುವುದನ್ನು ಕಂಡ ಪ್ರತ್ಯಕ್ಷದರ್ಶಿಗಳು ಸಾಕ್ಷಿಗಳಾಗಿ ಬರಬೇಕೆಂದು ಸಿರ್ಸಾ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಜ್ಜನ್ ಕುಮಾರ್ ಮಾದರಿಯಲ್ಲೇ ಕಮಲ್ ನಾಥ್ ಕೂಡ ಶೀಘ್ರವೇ ಬಂಧನಕ್ಕೊಳಗಾಗಲಿದ್ದಾರೆ ಎಂದು ಅಕಾಲಿ ದಳದ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com