ಐಎನ್ಎಕ್ಸ್ ಮೀಡಿಯಾ ಕೇಸಿನಲ್ಲಿ ಯಾವೊಬ್ಬ ಅಧಿಕಾರಿಯನ್ನೂ ಬಂಧಿಸಬೇಡಿ; ಚಿದಂಬರಂ ಟ್ವೀಟ್!

ಐಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಪಟ್ಟಂತೆ ಜೈಲಿನಲ್ಲಿರುವ ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಈ ವಿಷಯದಲ್ಲಿ ಯಾವೊಬ್ಬ ಅಧಿಕಾರಿಯೂ ಏನೂ ತಪ್ಪು ಮಾಡಿಲ್ಲ. ಹೀಗಾಗಿ ಯಾರನ್ನೂ ಬಂಧಿಸುವುದು ಬೇಡ ಎಂದು ಹೇಳಿದ್ದಾರೆ.
 

Published: 09th September 2019 02:23 PM  |   Last Updated: 09th September 2019 02:34 PM   |  A+A-


P Chidambaram produced at a Delhi court in connection with INX Media case.

ಪಿ ಚಿದಂಬರಂ ಅವರನ್ನು ದೆಹಲಿ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದ ಸಂದರ್ಭ

Posted By : Sumana Upadhyaya
Source : PTI

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಪಟ್ಟಂತೆ ಜೈಲಿನಲ್ಲಿರುವ ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಈ ವಿಷಯದಲ್ಲಿ ಯಾವೊಬ್ಬ ಅಧಿಕಾರಿಯೂ ಏನೂ ತಪ್ಪು ಮಾಡಿಲ್ಲ. ಹೀಗಾಗಿ ಯಾರನ್ನೂ ಬಂಧಿಸುವುದು ಬೇಡ ಎಂದು ಹೇಳಿದ್ದಾರೆ.


ಕಳೆದ ವಾರ ತಿಹಾರ್ ಜೈಲು ಸೇರಿರುವ ಚಿದಂಬರಂ ಅಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಹೋದ ಕುಟುಂಬಸ್ಥರಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಸಂದೇಶವನ್ನು ಬರೆದು ಪೋಸ್ಟ್ ಮಾಡಿ ಎಂದು ಹೇಳಿದ್ದಾರೆ.
ಐಎನ್ ಎಕ್ಸ್ ಮೀಡಿಯಾ ಹಗರಣ ಕೇಸಿನಲ್ಲಿ ತಮ್ಮೊಬ್ಬರನ್ನೇ ಏಕೆ ಬಂಧಿಸಲಾಗಿದೆ ಎಂದು ಜನರು ತಮ್ಮನ್ನು ಕೇಳಿದ್ದಾರೆ, ಆದರೆ ಅದಕ್ಕೆ ತಮ್ಮಲ್ಲಿ ಉತ್ತರವಿಲ್ಲ ಎಂದಿದ್ದಾರೆ.


ಈ ಬಗ್ಗೆ ನನ್ನ ಪರವಾಗಿ ಟ್ವೀಟ್ ಮಾಡುವಂತೆ ನನ್ನ ಕುಟುಂಬಸ್ಥರಿಗೆ ಹೇಳಿದ್ದೇನೆ. ಈ ಕೆಲಸಕ್ಕೆ ಚಾಲನೆ ನೀಡಿದ ಮತ್ತು ಶಿಫಾರಸು ಮಾಡಿದ ಹತ್ತಾರು ಅಧಿಕಾರಿಗಳಿರುವಾಗ ಅವರನ್ನೆಲ್ಲಾ ಬಂಧಿಸದೆ ನಿಮ್ಮನ್ನು ಏಕೆ ಬಂಧಿಸಿದ್ದಾರೆ ಎಂದು ಜನರು ಕೇಳುತ್ತಾರೆ, ಕೊನೆ ಬಾರಿಗೆ ನೀವು ಸಹಿ ಹಾಕಿದ್ದಿರಿ ಎಂಬ ಕಾರಣಕ್ಕೆ ನಿಮ್ಮನ್ನು ತಪ್ಪಿತಸ್ಥ ಎಂದು ಬಂಧಿಸಿದ್ದಾರೆಯೇ ಎಂದು ಕೇಳುತ್ತಾರೆ, ಆದರೆ ನನ್ನ ಬಳಿ ಇದಕ್ಕೆ ಉತ್ತರವಿಲ್ಲ ಎಂದು ಚಿದಂಬರಂ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಆಗಿದೆ. 


ಯಾವ ಅಧಿಕಾರಿಯೂ ಏನೂ ತಪ್ಪು ಮಾಡಿಲ್ಲ, ಈ ಕುರಿತು ಬೇರೆಯವರು ಬಂಧನವಾಗುವುದನ್ನು ನೋಡಲು ನನಗೆ ಇಷ್ಟವಿಲ್ಲ ಎಂದು ಮತ್ತೊಂದು ಟ್ವೀಟ್ ಮಾಡಲಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp