ಚಂದ್ರನ ಮೇಲೆ ಲ್ಯಾಂಡರ್ ಪತನ ಕುರಿತು ಇಸ್ರೋ, ಇಸ್ರೇಲ್ ಪರಸ್ಪರ ಮಾಹಿತಿ ಹಂಚಿಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹಾಗೂ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಪತನ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಮುಂದಾಗಿವೆ.
ವಿಕ್ರಮ್ ಲ್ಯಾಂಡರ್
ವಿಕ್ರಮ್ ಲ್ಯಾಂಡರ್

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹಾಗೂ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಪತನ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಮುಂದಾಗಿವೆ.

ಕಳೆದ ಏಪ್ರಿಲ್ 11ರಂದು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸಿದ ನಾಲ್ಕನೇ ದೇಶವಾಗಬೇಕೆಂಬ ಪ್ರಯತ್ನದಲ್ಲಿ ಇಸ್ರೇಲ್‍ ಬಾಹ್ಯಾಕಾಶ ಸಂಸ್ಥೆ ಕಳುಹಿಸಿದ್ದ, ಬಾಹ್ಯಾಕಾಶ ನೌಕೆ ‘ಬೆರೆಶೀಟ್” ನ ಪ್ರಮುಖ ಇಂಜಿನ್‍ ವೈಫಲ್ಯಕ್ಕೊಳಗಾಗಿ ಪತನಗೊಂಡಿತ್ತು. ಈಗ ಇಸ್ರೋ ಸಂಸ್ಥೆ ಕುಳಹಿಸಿದ್ದ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆ.

ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಬಗ್ಗೆ ತನಿಖೆ ಪೂರ್ಣಗೊಳಿಸಿರುವ ಇಸ್ರೋದ ಅವಲೋಕನಾ ಸಮತಿ, ಲ್ಯಾಂಡರ್ ಮಾಸ್ಟರ್ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಳ್ಳಲು ಕಾರಣ ಏನು ಎಂಬುದರ ಕುರಿತು ಇಸ್ರೋ ಮುಖ್ಯಸ್ಥರು ಹಾಗೂ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರು ಪರಸ್ಪರ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಇಸ್ರೋದ ವಿಜ್ಞಾನಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇಸ್ರೇಲ್ ಬೆರೆಶೀಟ್ ಪತನ ಮತ್ತು ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಳ್ಳುವುದಕ್ಕೆ ಒಂದೇ ರೀತಿಯ ಕಾರಣಗಳಿರಬಹುದು ಎಂದು ಇಸ್ರೋ ಮತ್ತು ಇಸ್ರೇಲ್ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಏಪ್ರಿಲ್ ನಲ್ಲಿ ಇಸ್ರೇಲ್ ನ ಬೆರೆಶೀಟ್ ನೌಕೆ ಸಹ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಭಾರತ ಈಗ ಎದುರಿಸಿರುವ ಸವಾಲನ್ನೇ ಎದುರಿಸಿತ್ತು. ಹೀಗಾಗಿ ಪರಸ್ಪರ ಮಾಹಿತಿ ಹಂಚಿಕೆಗೆ ಉಭಯ ಬಾಹ್ಯಾಕಾಶ ಸಂಸ್ಥೆಗಳು ನಿರ್ಧರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com