ಅಸ್ಸಾಂ ಮಾತ್ರವಲ್ಲ, ದೇಶದ ಎಲ್ಲಾ ಅಕ್ರಮ ವಲಸಿಗರನ್ನೂ ಹೊರಹಾಕಲಿದ್ದೇವೆ: ಅಮಿತ್ ಶಾ

ಕೇವಲ ಆಸ್ಸಾಂ  ರಾಜ್ಯದಲ್ಲಿ ನಲ್ಲಿರುವ ಅಕ್ರಮ ಬಾಂಗ್ಲಾ  ವಲಸಿಗರನ್ನು ಮಾತ್ರವಲ್ಲ ಇಡಿ ದೇಶದಲ್ಲಿ ಹರಡಿಕೊಂಡಿರುವ ಎಲ್ಲ  ಅಕ್ರಮ ವಲಸಿಗರನ್ನು ಉಚ್ಛಾಟಿಸುವ  ಉದ್ದೇಶವನ್ನು  ಕೇಂದ್ರ ಸರ್ಕಾರ ಹೊಂದಿದೆ ಎಂದು  ಗೃಹ ಸಚಿವ  ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಗೌಹಾತಿ: ಕೇವಲ ಆಸ್ಸಾಂ  ರಾಜ್ಯದಲ್ಲಿ ನಲ್ಲಿರುವ ಅಕ್ರಮ ಬಾಂಗ್ಲಾ  ವಲಸಿಗರನ್ನು ಮಾತ್ರವಲ್ಲ ಇಡಿ ದೇಶದಲ್ಲಿ ಹರಡಿಕೊಂಡಿರುವ ಎಲ್ಲ  ಅಕ್ರಮ ವಲಸಿಗರನ್ನು ಉಚ್ಛಾಟಿಸುವ  ಉದ್ದೇಶವನ್ನು  ಕೇಂದ್ರ ಸರ್ಕಾರ ಹೊಂದಿದೆ ಎಂದು  ಗೃಹ ಸಚಿವ  ಅಮಿತ್ ಶಾ ಹೇಳಿದ್ದಾರೆ.

ವಲಯದ   ಎನ್ ಡಿ ಎ ಮೈತ್ರಿಕೂಟದ  ಆವೃತ್ತಿ   ಈಶಾನ್ಯ ಪ್ರಜಾಸತ್ತಾತ್ಮಕ  ಮೈತ್ರಿಕೂಟದ  ನಾಲ್ಕನೇ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು,  ಈ ಹಿಂದೆ ದೇಶವನ್ನು ಸುದೀರ್ಘವಾಗಿ ಆಡಳಿತ ನಡೆಸಿದ್ದ  ಕಾಂಗ್ರೆಸ್ ನೇತೃತ್ವದ ಸರ್ಕಾರಗಳು  ಈಶಾನ್ಯ ರಾಜ್ಯಗಳ ಅಭಿವೃದ್ದಿಗೆ  ಏನನ್ನೂ ಮಾಡಲಿಲ್ಲ. ದೇಶ ಉಳಿದ ಭಾಗದಿಂದ  ಈ ಪ್ರದೇಶವನ್ನು ದೂರ ಇರಿಸಿತ್ತು ಎಂದು ಆರೋಪಿಸಿದರು.

 ಕೇವಲ ಆಸ್ಸಾಂ ನಿಂದ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು  ಹೊರಗಟ್ಟಬೇಕೆಂಬುದು  ಕೇಂದ್ರ ಸರ್ಕಾರದ ಉದ್ದೇಶವಾಗಿದೆ  ಎಂದು  ಗೃಹ ಸಚಿವ  ಅಮಿತ್ ಶಾ ಘೋಷಿಸಿದರು


ಕಾಂಗ್ರೆಸ್ ಕಳೆದ  70 ವರ್ಷಗಳಿಂದ  ಈ ಪ್ರದೇಶವನ್ನು  ಕಡೆಗಣಿಸಿದ್ದೇ  ಬಂಡುಕೋರರ ಸಮಸ್ಯೆಗೆ ಮೂಲ ಕಾರಣ ಎಂದು  ಅವರು ವಿಶ್ಲೇಷಿಸಿದರು.   ಈಶಾನ್ಯ ರಾಜ್ಯಗಳಲ್ಲಿ   ಕಾಂಗ್ರೆಸ್  “ಸಂಘರ್ಷ ವೆಂಬ ವಿಷ ಭೀಜ” ವನ್ನು ಬಿತ್ತಿದೆ ಈ ವಲಯದ ಅಭಿವೃದ್ಧಿಗೆ ಅದು ಯಾವುದೇ ಶ್ರಮ ವಹಿಸಲಿಲ್ಲ.  ಇದರಿಂದ  ಬಂಡಕೋರರ ಹಾವಳಿ ಹೆಚ್ಚಿದೆ, ಕಾಂಗ್ರೆಸ್   ಒಡೆದು ಹಾಳುವ ನೀತಿಯನ್ನು ಹೆಚ್ಚು ನಂಬುತ್ತದೆ ಎಂದು  ಅಮಿತ್ ಶಾ  ದೂರಿದರು.

 ಇದಕ್ಕೂ ಮುನ್ನ ದೀಸ್ಪುರದಲ್ಲಿ  ಮಾತನಾಡಿ ದೇಶದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗ  ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ, ಅಕ್ರಮವಾಗಿ ಬಂದ ಎಲ್ಲರನ್ನೂ ಓಡಿಸುತ್ತೇವೆ ಎಂದು ಅಮಿತ್ ಶಾ  ಗುಡುಗಿದ್ದರು. ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕುರಿತು ಮಾತನಾಡಿ,  ಎನ್‌ಆರ್‌ಸಿ ಕುರಿತಾಗಿ ವಿವಿಧ ರೀತಿಯ ಪ್ರಶ್ನೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

 ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ದೇಶದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ,  ಎಲ್ಲರನ್ನೂ  ಉಚ್ಛಾಟಿಸುತ್ತೇವೆ.  ಈಶಾನ್ಯ ರಾಜ್ಯಗಳಿಗೆ  ಕಲ್ಪಿಸಲಾಗಿರುವ 371 ಅನುಚ್ಚೇದವನ್ನು ರದ್ದು ಮಾಡುವ  ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

 ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಗೂ, ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ 371 ಪರಿಚ್ಚೇದದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಈ ಸ್ಥಾನಮಾನವನ್ನು ರದ್ದು ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಕೈ ಹಾಕುವುದಿಲ್ಲ. ಈ ಬಗ್ಗೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಅಮಿತ್ ಶಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com