'ಪೊಲೀಸರು, ಜಿಲ್ಲಾಧಿಕಾರಿಗಳ ಕುತ್ತಿಗೆ ಪಟ್ಟಿ ಹಿಡಿದರೆ ದೊಡ್ಡ ಮನುಷ್ಯರಾಗಬಹುದು'

ಪೊಲೀಸ್ ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕುತ್ತಿಗೆ ಪಟ್ಟಿ ಹಿಡಿದು ಜಗ್ಗಿದರೆ ದೊಡ್ಡ ಮನುಷ್ಯರಾಗಬಹುದಂತೆ....!
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೊಡ್ಡ ಮನುಷ್ಯರಾಗುವುದು ಹೇಗೆ ಎಂದು ಪ್ರಶ್ನೆ ಕೇಳಿದ ಮಕ್ಕಳಿಗೆ ಛತ್ತೀಸ್ ಗಢ ಸಚಿವ ಕವಾಸಿ ಲಖ್ಮಾ ನೀತಿ ಪಾಠ......!

ರಾಯ್ ಪುರ: ಪೊಲೀಸ್ ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕುತ್ತಿಗೆ ಪಟ್ಟಿ ಹಿಡಿದು ಜಗ್ಗಿದರೆ ದೊಡ್ಡ ಮನುಷ್ಯರಾಗಬಹುದಂತೆ....!

ಹೀಗೆಂದು ಛತ್ತೀಸ್ ಗಢ ಸಚಿವ ಕವಾಸಿ ಲಖ್ಮಾ ಹೇಳಿದ್ದು, ಅವರ ಈ ಹೇಳಿಕೆ ಇದೀಗ ಭಾರಿ ವಿವಾದ ಹುಟ್ಟುಹಾಕಿದೆ. ಛತ್ತೀಸ್ ಘಡದಲ್ಲಿ ಶಾಲೆಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಖವಾಸಿ ಲಕ್ಮಾ ಮಕ್ಕಳೊಂದಿಗೆ ಕುಳಿತಿದ್ದಾಗ ಅಲ್ಲಿದ್ದ ವಿದ್ಯಾರ್ಥಿಯೋರ್ವ ನೀವು ಇಷ್ಟು ದೊಡ್ಡಮನುಷ್ಯರಾಗಿದ್ದೀರಿ... ನಾವೂ ಕೂಡ ನಿಮ್ಮಹಾಗೆ ದೊಡ್ಡ ಮನುಷ್ಯರಾಗಲು ಏನು ಮಾಡಬೇಕು ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸಿದ ಖವಾಸಿ, ನನ್ನಂತೆಯೇ ದೊಡ್ಡ ಮನುಷ್ಯನಾಗಲು ಪೊಲೀಸ್ ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕುತ್ತಿಗೆ ಪಟ್ಟಿ ಹಿಡಿದು ಎಳೆಯಬೇಕು ಎಂದು ಉತ್ತರಿಸುತ್ತಾರೆ. 

ಈ ಉತ್ತರಕ್ಕೆ ಅಲ್ಲಿ ನೆರೆದಿದ್ದವರೆಲ್ಲರೂ ನಗುತ್ತಾರೆ. ಈ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಲ್ಲದೆ ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಉಲ್ಟಾ ಹೊಡೆದಿರುವ ಸಚಿವ ಖವಾಸಿ, ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಕೆಲ ಮಕ್ಕಳು ನನ್ನಂತೆಯೇ ದೊಡ್ಡ ಮನುಷ್ಯರಾಗಲು ಏನು ಮಾಡಬೇಕು ಎಂದು ಕೇಳಿದರು. ಅದಕ್ಕೆ ನಾನು ಮೊದಲು ಜನರಿಗೆ ಸೇವೆ ಮಾಡಬೇಕು. ಅವರಿಗಾಗಿ ಜಿ್ಲಾಧಿಕಾರಿಗಳ ಬಳಿ ಹೋರಾಟ ಮಾಡಬೇಕು ಎಂದು ಹೇಳಿದ್ದೆ. ಆದರೆ ಈ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ ಈ ವಿಡಿಯೋದಲ್ಲಿ ಖವಾಸಿ ಹೇಳಿಕೆ ಸ್ಪಷ್ಟವಾಗಿ ದಾಖಲಾಗಿದ್ದು, ಮಾಧ್ಯಮಗಳಲ್ಲಿ ಸಚಿವ ಖವಾಸಿ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com