7 ವರ್ಷಗಳಲ್ಲಿ ಮಿಲಿಟರಿ ಆಧುನೀಕರಣಕ್ಕೆ ಕ್ರಮ; ಕೇಂದ್ರದಿಂದ 130 ಶತಕೋಟಿ ರೂ. ವೆಚ್ಚ

ದೇಶದಲ್ಲಿ ಭದ್ರತೆ ವಿಚಾರದಲ್ಲಿ ಸಂಕೀರ್ಣ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ಮಿಲಿಟರಿ ಪಡೆಯನ್ನು ಆಧುನೀಕರಣಗೊಳಿಸಿ ಬಲಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
 

Published: 11th September 2019 10:53 AM  |   Last Updated: 11th September 2019 12:31 PM   |  A+A-


File Image for Representational Purposes.

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ನವದೆಹಲಿ: ದೇಶದಲ್ಲಿ ಭದ್ರತೆ ವಿಚಾರದಲ್ಲಿ ಸಂಕೀರ್ಣ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ಮಿಲಿಟರಿ ಪಡೆಯನ್ನು ಆಧುನೀಕರಣಗೊಳಿಸಿ ಬಲಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.


ಸೇನಾಪಡೆಯ ಮೂರೂ ದಳಗಳನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನಲೆಯಲ್ಲಿ ಭಾರೀ ಸಂಕೀರ್ಣತೆಯ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಯುದ್ಧ ಹಡಗುಗಳನ್ನು ಮುಂದಿನ ಕೆಲ ವರ್ಷಗಳಲ್ಲಿ ಸಂಗ್ರಹಿಸಲಾಗುತ್ತದೆ.


ಸರ್ಕಾರದ ಈ ಬೃಹತ್ ಯೋಜನೆಯಡಿ, ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು 130 ಶತಕೋಟಿ ಖರ್ಚು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸೇನೆಯ ಆದ್ಯತೆಗೆ ಸಂಬಂಧಿಸಿದಂತೆ ಕಾಲಾಳುಪಡೆಗಳನ್ನು ಆಧುನೀಕರಣಗೊಳಿಸುವುದು, 2,600 ಕಾಲಾಳು ಯುದ್ಧ ವಾಹನಗಳನ್ನು ಸಂಗ್ರಹಿಸುವುದು ಮತ್ತು 1,700 ಭವಿಷ್ಯದ ಯುದ್ಧ ವಿಮಾನಗಳನ್ನು ಸಂಗ್ರಹಿಸುವುದು ಒಳಗೊಂಡಿದೆ.


ವಾಯುಪಡೆಗೆ ಸಂಬಂಧಿಸಿದಂತೆ, 110 ಹಲವು ಕಾರ್ಯಗಳನ್ನು ಮಾಡಬಲ್ಲ ಯುದ್ಧವಿಮಾನಗಳನ್ನು ಸಂಗ್ರಹಿಸುವುದು ಸೇರಿಕೊಂಡಿದೆ. ಸೇನಾಪಡೆಯನ್ನು ಪ್ರತಿ ಹಂತದಲ್ಲಿ ಸಜ್ಜುಗೊಳಿಸುವ ಯೋಜನೆಯಿದೆ. ನೌಕಾಪಡೆಯು ಪ್ರತಿ ಹಂತಗಳಾದ ನೀರಿನ ಮೇಲೆ, ನೀರಿನಡಿಯಲ್ಲಿ ಮತ್ತು ಆಕಾಶದಲ್ಲಿ ಯುದ್ಧ ಮಾಡಲು ಸಿದ್ಧಗೊಳಿಸಲಾಗುತ್ತದೆ. ನೌಕಾಪಡೆಗೆ 200 ಹಡಗುಗಳು, 500 ಯುದ್ಧ ವಿಮಾನಗಳು ಮತ್ತು 24 ಯುದ್ಧ ಮಾಡುವ ಜಲಂತರ್ಗಾಮಿಯನ್ನು ಮುಂದಿನ 3ರಿಂದ 4 ವರ್ಷಗಳಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಸುಮಾರು 132 ಹಡಗುಗಳು, 220 ಯುದ್ಧ ವಿಮಾನಗಳು ಮತ್ತು 15 ಜಲಾಂತರ್ಗಾಮಿ ನೌಕೆಗಳಿವೆ.


ಸಮತೋಲನಕ್ಕೆ ಏಟು: ಸೇನಾಪಡೆಯನ್ನು ಆಧುನೀಕರಣಗೊಳಿಸುವುದು ಸಾಮಾನ್ಯ ವಿಷಯವೇನಲ್ಲ. ಅನೇಕ ಸವಾಲುಗಳು ಮತ್ತು ಸಮಸ್ಯೆಗಳು ಎದುರಾಗಬಹುದು. ಈ ಆಧುನೀಕರಣದ ತೊಂದರೆಗಳ ಮಧ್ಯೆ, ಸೈನ್ಯವು ತನ್ನ ಪ್ರಸ್ತುತ ಯೋಜನೆಯನ್ನು ಸಮತೋಲನಗೊಳಿಸುವ ಕೆಲಸ ಮಾಡುತ್ತಿದೆ.


ಭಾರತೀಯ ಸೇನೆಯಲ್ಲಿ ಪ್ರಸ್ತುತ 12 ಲಕ್ಷದ 28 ಸಾವಿರದ 59 ಅಧಿಕಾರಿಗಳು ಮತ್ತು ಪುರುಷರಿದ್ದಾರೆ. ಸೇನೆಯ 13ನೇ ರಿಕಾಸ್ಟ್ ಯೋಜನೆಯಡಿ ಸೇನೆಯ ಪ್ರತಿ ವಿಭಾಗವನ್ನು ಆಧುನೀಕರಣಗೊಳಿಸಿ ಸಮತೋಲನಗೊಳಿಸಬೇಕಾಗಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp