ಶಾಲಾ ಶೌಚಾಲಯದೊಳಗೆ ರಾಸಲೀಲೆ: ಶಿಕ್ಷಕನಿಗೆ ಗ್ರಾಮಸ್ಥರಿಂದ ಥಳಿತ

ಶಾಲೆಯ ಶೌಚಾಲಯದಲ್ಲಿ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ  ಶಿಕ್ಷಕನನ್ನು  ಗ್ರಾಮಸ್ಥರೇ  ಹಿಡಿದು ಥಳಿಸಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆ  ಪುದುಚತ್ರಂ ಬಳಿಯ  ಎಸ್.ಉದುಂಬಮ್ ಎಂಬ ಗ್ರಾಮದಲ್ಲಿ ನಡೆದಿದೆ.
 

Published: 11th September 2019 12:44 PM  |   Last Updated: 11th September 2019 02:31 PM   |  A+A-


Villagers thrash the accused teacher at the govt school in Tamil Nadu.

ಗ್ರಾಮಸ್ಥರು ಶಿಕ್ಷಕನಿಗೆ ಹೊಡೆಯುತ್ತಿರುವುದು

Posted By : Sumana Upadhyaya
Source : Online Desk

ಚೆನ್ನೈ: ಶಾಲೆಯ ಶೌಚಾಲಯದಲ್ಲಿ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ  ಶಿಕ್ಷಕನನ್ನು  ಗ್ರಾಮಸ್ಥರೇ  ಹಿಡಿದು ಥಳಿಸಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆ  ಪುದುಚತ್ರಂ ಬಳಿಯ  ಎಸ್.ಉದುಂಬಮ್ ಎಂಬ ಗ್ರಾಮದಲ್ಲಿ ನಡೆದಿದೆ.


ಶಾಲೆಯ  ಪಕ್ಕದಲ್ಲಿರುವ ಅಂಗನವಾಡಿಯಲ್ಲಿ  ಕೆಲಸ ಮಾಡುತ್ತಿದ್ದ ಮಹಿಳೆಯ  ಜತೆ   ಶಿಕ್ಷಕ ಸರವಣನ್  ಎಂಬುವರರು   ಅಕ್ರಮ ಸಂಬಂಧ ಇರಿಸಿಕೊಂಡಿದ್ದು,   ಆತ ಕಳೆದ ಕೆಲವು ತಿಂಗಳುಗಳಿಂದ ಶಾಲೆಯ ಶೌಚಾಲಯದಲ್ಲಿ  ಆಕೆಯೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದ.  ಇದನ್ನು ಗಮನಿಸಿದ ವಿದ್ಯಾರ್ಥಿಗಳು  ವಿಷಯವನ್ನು ಪೋಷಕರಿಗೆ ತಿಳಿಸಿದ್ದರು.


ಮಂಗಳವಾರ ಬೆಳಿಗ್ಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಶಾಲೆಯ ಬಳಿ ಜಮಾಯಿಸಿ,  ಶಿಕ್ಷಕ  ಸರವಣನ್ ನನ್ನು ಹಿಡಿದು ಮಹಿಳೆಯೊಂದಿಗಿನ ಅಕ್ರಮ ಸಂಬಂಧ ವಿಷಯ ಪ್ರಸ್ತಾಪಿಸಿ, ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಮಹಿಳೆಯರು  ಶಿಕ್ಷಕನಿಗೆ ಚಪ್ಪಲಿ ಹಾಗೂ ಪೊರಕೆಯಿಂದ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದರು.   


ಈ ವಿಷಯ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಜಯರಾಜ್  ಮಾತನಾಡಿ,  "ಎರಡು ತಿಂಗಳ ಹಿಂದೆ   ಇದೇ ರೀತಿ  ಸರವಣನ್ ಅವರು ಮಹಿಳೆಯೊಂದಿಗೆ  ಶಾಲೆಯ ಶೌಚಾಲಯಲ್ಲಿರುವ ಮಾಹಿತಿ ತಿಳಿಯಿತು. ಕೂಡಲೇ     ಅಲ್ಲಿಗೆ ತೆರಳಿದಾಗ  ಶೌಚಾಲಯದ  ಬೀಗ ಹಾಕಲಾಗಿತ್ತು.  ಶೌಚಾಲಯ  ಬೀಗ ತೆಗೆದು ಒಳಗೆ ನೋಡಿದಾಗ  ಮಹಿಳೆ   ಒಳಗೆ ಇದ್ದಳು. ನಂತರ  ಸರವಣನ್ ಅವರಿಗೆ ಎಚ್ಚರಿಕೆ ನೀಡಿದ್ದೆ  ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp