ಪ್ರಾಮಾಣಿಕ ಗಂಡ ಮತ್ತು ಪ್ರೇಮಿಯಾಗಿರಿ: ಹಿಂದೂ ಯುವತಿ ಮದುವೆಯಾದ ಮುಸ್ಲಿಂ ಯುವಕನಿಗೆ 'ಸುಪ್ರೀಂ' ಸಲಹೆ 

ಅಂತರ ಧರ್ಮ ನಂಬಿಕೆ ಮತ್ತು ಅಂತರ್ಜಾತಿ ವಿವಾಹದ ಬರವಾಗಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಇಂತಹ ಸಂಬಂಧಗಳಿಂದ ಸಮಾಜವಾದ ಬೆಳೆಯುತ್ತದೆ. ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ ನಿಷ್ಠಾವಂತ ಪತಿ ಮತ್ತು ಉತ್ತಮ ಪ್ರಿಯತಮನಾಗಿರಬೇಕು ಎಂದು ಸಲಹೆ ನೀಡಿದೆ. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಅಂತರ ಧರ್ಮ ನಂಬಿಕೆ ಮತ್ತು ಅಂತರ್ಜಾತಿ ವಿವಾಹದ ಬರವಾಗಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಇಂತಹ ಸಂಬಂಧಗಳಿಂದ ಸಮಾಜವಾದ ಬೆಳೆಯುತ್ತದೆ. ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ ನಿಷ್ಠಾವಂತ ಪತಿ ಮತ್ತು ಉತ್ತಮ ಪ್ರಿಯತಮನಾಗಿರಬೇಕು ಎಂದು ಸಲಹೆ ನೀಡಿದೆ.


ಅಂತರ ಧರ್ಮೀಯ ಮದುವೆಗಳಿಗೆ ನಾವು ವಿರೋಧಿಗಳಲ್ಲ. ಹಿಂದೂ-ಮುಸ್ಲಿಂ ವಿವಾಹ ಒಪ್ಪುವಂತದ್ದೇ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ತಮ್ಮ ಪುತ್ರಿ ಮುಸ್ಲಿಂನನ್ನು ಮದುವೆಯಾಗಿದ್ದನ್ನು ವಿರೋಧಿಸಿ ಛತ್ತೀಸ್ ಗಢ ಮೂಲದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಹೀಗೆ ಹೇಳಿದೆ. ತನ್ನ ಪತ್ನಿಯ ಕುಟುಂಬದವರು ತನ್ನನ್ನು ಸ್ವೀಕರಿಸಬೇಕು ಎಂದು ಮುಸ್ಲಿಂ ಯುವಕ ಹಿಂದೂವಾಗಿ ಬದಲಾಗಿದ್ದನು, ಆದರೆ ಮದುವೆ ನಂತರ ಮುಸ್ಲಿಂ ಆಗಿ ಮತ್ತೆ ಬದಲಾಗಿದ್ದಾನೆ ಎಂದು ಕೂಡ ಅರ್ಜಿಯಲ್ಲಿ ದೂರು ನೀಡಿದ್ದರು.


ಹೈಕೋರ್ಟ್ ನಲ್ಲಿ ಈ ಹಿಂದೂ-ಮುಸ್ಲಿಂ ಜೋಡಿ ಪರವಾಗಿ ತೀರ್ಪು ಬಂದ ಹಿನ್ನಲೆಯಲ್ಲಿ ಹುಡುಗಿಯ ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. 


ಯುವತಿಯ ತಂದೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹಟಗಿ, ಅಂತರ ಧರ್ಮೀಯ ಮದುವೆಗಳ ಹೆಸರಿನಲ್ಲಿ ದಂಧೆಯೇ ನಡೆಯುತ್ತಿದ್ದು ನ್ಯಾಯಾಲಯ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ವಾದಿಸಿದರು.


ಇದಕ್ಕೆ ದಂಪತಿ ಪರ ವಕೀಲ, ಕೇರಳದ ಹದಿಯಾ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಸ್ತಾಪಿಸಿ ಮದುವೆ ವಿಚಾರದಲ್ಲಿ ತನಿಖೆಯನ್ನು ವಿರೋಧಿಸಬೇಕು ಎಂದರು. ಆರ್ಯ ಸಮಾಜ ದೇವಸ್ಥಾನದಲ್ಲಿ ನಡೆದ ಮದುವೆ ವೇಳೆ ಮುಸ್ಲಿಂ ಯುವಕ ತನ್ನ ಹೆಸರನ್ನು ಕಾನೂನು ಕ್ರಮದ ಮೂಲಕ ಬದಲಿಸಿದ್ದನೇ ಎಂದು ಕೋರ್ಟ್ ವಿಚಾರಿಸಿತು. 


ವಿಚಾರಣೆ ನಡೆಸಿದ ನ್ಯಾಯಪೀಠ, ಮದುವೆ ಬಗ್ಗೆ ತನಿಖೆ ಮಾಡುವುದಿಲ್ಲ, ಹುಡುಗಿಯರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು. ನಮಗೆ ಇಲ್ಲಿ ಕಾನೂನು ಮುಖ್ಯವಲ್ಲ, ಮದುವೆಯಾದ ಯುವತಿಯ ಭವಿಷ್ಯ ಮುಖ್ಯ, ಈ ಕುರಿತು ರಾಜ್ಯ ಸರ್ಕಾರ ಉತ್ತರ ನೀಡಬೇಕೆಂದು ಹೇಳಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.


ಸಹ ಜೀವನಕ್ಕೆ ಕೋರ್ಟ್ ಈಗಾಗಲೇ ಮಾನ್ಯತೆ ಕೊಟ್ಟಿದ್ದು ಈ ವಿಚಾರವನ್ನು ತನಿಖೆ ಮಾಡುವ ಅಗತ್ಯವೇ ಇಲ್ಲ. ಮದುವೆಯಾಗಿರುವ ದಂಪತಿಯ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಅವರ ನಂಬಿಕೆಯನ್ನು ಉಳಿಸುವುದು ಮುಖ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com