ಪೆರೋಲ್ ವಿಸ್ತರಣೆ ಕೋರಿ ನಳಿನಿ ಮನವಿ; ಮದ್ರಾಸ್ ಹೈಕೋರ್ಟ್ ತಿರಸ್ಕಾರ 

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಆರೋಪಿ ಎಸ್ ನಳಿನಿಗೆ ನೀಡಲಾಗಿದ್ದ ಪೆರೋಲ್ ನ್ನು ವಿಸ್ತರಿಸಲು ಮದ್ರಾಸ್ ಹೈಕೋರ್ಟ್ ನ ವಿಭಾಗೀಯ ಪೀಠ ನಿರಾಕರಿಸಿದೆ. 
ನಳಿನಿ ಶ್ರೀಹರನ್
ನಳಿನಿ ಶ್ರೀಹರನ್

ಚೆನ್ನೈ; ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಆರೋಪಿ ಎಸ್ ನಳಿನಿಗೆ ನೀಡಲಾಗಿದ್ದ ಪೆರೋಲ್ ನ್ನು ವಿಸ್ತರಿಸಲು ಮದ್ರಾಸ್ ಹೈಕೋರ್ಟ್ ನ ವಿಭಾಗೀಯ ಪೀಠ ನಿರಾಕರಿಸಿದೆ.


ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ಆರ್ ಎಂಟಿ ಟೀಕ್ಕ ರಾಮನ್ ಅವರನ್ನೊಳಗೊಂಡ ನ್ಯಾಯಪೀಠ ಇನ್ನೆರಡು ವಾರಗಳವರೆಗೆ ಪೆರೋಲ್ ವಿಸ್ತರಿಸಲು ನಿರಾಕರಿಸಿದರು. ನಳಿನಿ ಪರ ವಕೀಲರು ಅರ್ಜಿಯನ್ನು ಹಿಂತೆಗೆದುಕೊಳ್ಳಲು ಬಯಸಿದ ನಂತರ ನ್ಯಾಯಪೀಠ ಅರ್ಜಿದಾರರು ಅರ್ಜಿಯನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಹೇಳಿತು. 


ಕಳೆದ ಜುಲೈಯಲ್ಲಿ ಮಗಳ ಮದುವೆಗೆ ವ್ಯವಸ್ಥೆ ಮಾಡಿಕೊಳ್ಳಲೆಂದು ನ್ಯಾಯಪೀಠ ನಳಿನಿ ಶ್ರೀಹರನ್ ಗೆ ಒಂದು ತಿಂಗಳ ಸಾಮಾನ್ಯ ರಜೆಯನ್ನು ನೀಡಿತ್ತು. ಅದು ಆಗಸ್ಟ್ 25ಕ್ಕೆ ಮುಗಿದಿತ್ತು. ನಂತರ ರಜೆ ವಿಸ್ತರಣೆ ಮಾಡುವಂತೆ ನಳಿನಿ ಮನವಿ ಮಾಡಿದ್ದರಿಂದ ನ್ಯಾಯಪೀಠ ಮತ್ತೆ ಮೂರು ವಾರಗಳ ರಜೆ ನೀಡಿ ಅದು ಸೆಪ್ಟೆಂಬರ್ 15ಕ್ಕೆ ಮುಕ್ತಾಯವಾಗಲಿದೆ. 


ಶ್ರೀಲಂಕಾದಲ್ಲಿರುವ ತಮ್ಮ ಅತ್ತೆಗೆ ಮದುವೆಗೆ ಬರಲು ವೀಸಾ ಸಮಸ್ಯೆಯಾಗಿರುವುದರಿಂದ ಇನ್ನೂ ಎರಡು ವಾರ ರಜೆ ಕೊಡಿ ಎಂದು ನಳಿನಿ ಅರ್ಜಿ ಸಲ್ಲಿಸಿದ್ದರು. ಅದು ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ನಳಿನಿಗೆ ಸಾಕಷ್ಟು ರಜೆ ಈಗಾಗಲೇ ನೀಡಲಾಗಿದೆ, ಇನ್ನು ರಜೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳಿ ತೀರ್ಪು ನೀಡಿದರು.


ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ 7 ಮಂದಿ ಪ್ರಮುಖ ಆರೋಪಿಗಳಲ್ಲಿ ನಳಿನಿ ಶ್ರೀಹರನ್ ಕೂಡ ಒಬ್ಬರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com