ಮಹಾರಾಷ್ಟ್ರದ ವಿವಿಧೆಡೆ ಗಣಪತಿ ವಿಗ್ರಹ ವಿಸರ್ಜನೆ ವೇಳೆ 18 ಮಂದಿ ಜಲಸಮಾಧಿ

ಮುಂಬೈ, ಪುಣೆ, ಸಾಗ್ಲಿ ಸೇರಿದಂತೆ ವಿವಿಧೆಡೆ ಗಣಪತಿ ವಿಗ್ರಹ ವಿಸರ್ಜನೆ ವೇಳೆಯಲ್ಲಿ ಸುಮಾರು 18 ಮಂದಿ ಜಲ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣಪತಿ ವಿಗ್ರಹ
ಗಣಪತಿ ವಿಗ್ರಹ

ಮಹಾರಾಷ್ಟ್ರ: ಮುಂಬೈ, ಪುಣೆ, ಸಾಗ್ಲಿ ಸೇರಿದಂತೆ ವಿವಿಧೆಡೆ ಗಣಪತಿ ವಿಗ್ರಹ ವಿಸರ್ಜನೆ ವೇಳೆಯಲ್ಲಿ ಸುಮಾರು 18 ಮಂದಿ ಜಲ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮರಾವತಿ, ನಾಸಿಕ್, ಥಾಣೆ, ಸಿಂಧುದುರ್ಗ, ರತ್ನಗಿರಿ, ಧುಳೆ, ಬಾಂದ್ರಾ, ನಾಂದೆಡ್, ಅಹ್ಮದ್ ನಗರ, ಅಂಕೋಲಾ, ಸಾತಾರಾ ಸೇರಿದಂತೆ  11 ಜಿಲ್ಲೆಗಳಲ್ಲಿ ಗಣಪತಿ ವಿಗ್ರಹ  ವಿಸರ್ಜನೆ ವೇಳೆಯಲ್ಲಿ ದುರಂತವಾಗಿರುವ ಬಗ್ಗೆ ವರದಿಯಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಮರಾವತಿಯಲ್ಲಿ ನಾಲ್ವರು, ರತ್ನಗಿರಿಯಲ್ಲಿ ಮೂವರು, ನಾಸಿಕ್ , ಸಿಂಧ್ ದುರ್ಗ ಹಾಗೂ ಸತಾರಾದಲ್ಲಿ ತಲಾ ಇಬ್ಬರು, ಥಾಣೆಯಲ್ಲಿ ಒಬ್ಬರು , ಧುಳೆ, ಅಂಕೋಲಾ ಮತ್ತು ಬಾಂದ್ರಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಥಾಣೆಯಲ್ಲಿ ನಿನ್ನೆ ಸಂಜೆ 7-30ರ ಸುಮಾರಿನಲ್ಲಿ ಕಲ್ಪೇಶ್ ಜಾದವ್ ಎಂಬ 15 ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.  ಅಮರಾವತಿಯ ವಾಟೋಲ್ ಶುಕಲೇಶ್ವರ ಗ್ರಾಮದ ನದಿಯಲ್ಲಿ ಮುಳುಗಿದ್ದ ನಾಲ್ವರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com