ಕಾಶ್ಮೀರ: 370ನೇ ವಿಧಿ ರದ್ದತಿ ನಂತರ ಕೈಗಾರಿಕಾ ಕ್ಷೇತ್ರದಲ್ಲಿ 23,400 ಕೋಟಿ ರೂ. ನಷ್ಟ

ಸಂವಿಧಾನದ 370ನೇ ವಿಧಿ ರದ್ದತಿ ನಂತರ  ಮುಷ್ಕರ,  ನಿರ್ಬಂಧ ಮತ್ತು ಸಂವಹನಗಳ ಸ್ತಬ್ದತೆಯಿಂದಾಗಿ ಕಾಶ್ಮೀರದಲ್ಲಿನ ಕೈಗಾರಿಕಾ ಕ್ಷೇತ್ರದಲ್ಲಿ 39 ದಿನಗಳಲ್ಲಿ 23 ಸಾವಿರದ 400 ಕೋಟಿಯಷ್ಟು ನಷ್ಟ ಸಂಭವಿಸಿದೆ. 

Published: 13th September 2019 10:34 AM  |   Last Updated: 13th September 2019 11:48 AM   |  A+A-


ಜಮ್ಮುಶ್ರೀನಗರ ಹೆದ್ದಾರಿ

Posted By : Nagaraja AB
Source : The New Indian Express

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದತಿ ನಂತರ  ಮುಷ್ಕರ,  ನಿರ್ಬಂಧ ಮತ್ತು ಸಂವಹನಗಳ ಸ್ತಬ್ದತೆಯಿಂದಾಗಿ ಕಾಶ್ಮೀರದಲ್ಲಿನ ಕೈಗಾರಿಕಾ ಕ್ಷೇತ್ರದಲ್ಲಿ 39 ದಿನಗಳಲ್ಲಿ 23 ಸಾವಿರದ 400 ಕೋಟಿಯಷ್ಟು ನಷ್ಟ ಸಂಭವಿಸಿದೆ. 

ಕೈಗಾರಿಕಾ ಇಲಾಖೆ ಅಧಿಕೃತ ಮಾಹಿತಿ ಪ್ರಕಾರ ಕಾಶ್ಮೀರದಲ್ಲಿ 14 ಇಂಡಸ್ಟ್ರೀಯಲ್ ಎಸ್ಟೇಟ್ಸ್  ಹಾಗೂ 21 ಸಾವಿರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸಿಮೆಂಟ್ ಫ್ಲಾಂಟ್ಸ್, ಆಹಾರ ಸಂಸ್ಕರಣಾ ಘಟಕಗಳು, ಮರ ಸಂಬಂಧಿತ ಘಟಕಗಳು, ಹಾಲು, ಖನಿಜಯುಕ್ತ ನೀರು ಮತ್ತಿತರ ಉತ್ಪಾದನಾ ಘಟಕಗಳಿವೆ.  ಸುಮಾರು 7 ಲಕ್ಷ  ಕೆಲಸಗಾರರಿದ್ದಾರೆ. ಒಂದು ಲಕ್ಷ ಖಾಯಂ ಹಾಗೂ ಆರು ಲಕ್ಷ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಆಗಸ್ಟ್ 5 ರಿಂದ ಎಲ್ಲಾ ರೀತಿಯ ಉತ್ಪಾದನಾ ಘಟಕಗಳು ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿವೆ. ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಪ್ರತಿದಿನ 600 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. 39 ದಿನಗಳಲ್ಲಿ ಒಟ್ಟಾರೇ 23, 400 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp