ಮುಂಬೈ ಕ್ಯಾಬ್ ಡ್ರೈವರ್ ನಿಂದ ಕಿರುಕುಳ, ಸಂಸದೆ ಸುಪ್ರಿಯಾ ಸುಳೆ ದೂರು; ಆರೋಪಿ ಬಂಧನ 

ವಾಣಿಜ್ಯ ನಗರಿಯ ಕೇಂದ್ರ ರೈಲ್ವೆ ದಾದಾರ್ ಟರ್ಮಿನಲ್ ನಲ್ಲಿ ಕ್ಯಾಬ್ ಚಾಲಕನಿಂದ ತಮಗೆ ಕಿರುಕುಳವಾಗಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. 
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ

ಮುಂಬೈ; ವಾಣಿಜ್ಯ ನಗರಿಯ ಕೇಂದ್ರ ರೈಲ್ವೆ ದಾದಾರ್ ಟರ್ಮಿನಲ್ ನಲ್ಲಿ ಕ್ಯಾಬ್ ಚಾಲಕನಿಂದ ತಮಗೆ ಕಿರುಕುಳವಾಗಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.


ಘಟನೆಗೆ ಸಂಬಂಧಿಸಿ ಸುಪ್ರಿಯಾ ಸುಳೆ ರೈಲ್ವೆ ರಕ್ಷಣಾ ಪಡೆ(ಆರ್ ಪಿಎಫ್)ಯಲ್ಲಿ ದೂರು ದಾಖಲಿಸಿದ್ದು ಕ್ಯಾಬ್ ಚಾಲಕ ಕುಲ್ಜೀತ್ ಸಿಂಗ್ ಮಲ್ಹೋತ್ರಾ, ರೈಲ್ವೆ ನಿಲ್ದಾಣದೊಳಗೆ ನುಗ್ಗಿಬಂದು ಬಲವಂತವಾಗಿ ಟ್ಯಾಕ್ಸಿ ಸೇವೆ ಒದಗಿಸಲು ಮುಂದಾದನು.
ಎರಡು ಬಾರಿ ತಾವು ಬೇಡವೆಂದರೂ ನನ್ನ ಹಾದಿಗೆ ಅಡ್ಡಬಂದು ನನಗೆ ತೊಂದರೆ ನೀಡಿ ನನ್ನ ಪಕ್ಕ ನಿಂತು ಫೋಟೋ ತೆಗೆದುಕೊಂಡು ಹೋದನು ಎಂದು ಸುಪ್ರಿಯಾ ಸುಳೆ ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.


ಟ್ವೀಟ್ ನ್ನು ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್ ಗೆ ಟ್ಯಾಗ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಕೂಡಲೇ ಗಮನಹರಿಸಿ, ನನ್ನಂತೆ ಬೇರೆ ಪ್ರಯಾಣಿಕರು ಇಂತಹ ಪರಿಸ್ಥಿತಿ ಎದುರಿಸಬಾರದು. ಟ್ಯಾಕ್ಸಿ ಸೇವೆ ನೀಡಲು ಬಲವಂತ ಮಾಡುವುದು ಕಾನೂನಿನಲ್ಲಿ ಅವಕಾಶವಿದ್ದರೆ ಅದನ್ನು ರೈಲ್ವೆ ಸ್ಟೇಷನ್ ಅಥವಾ ವಿಮಾನ ನಿಲ್ದಾಣ ಒಳಗಡೆ ಅವಕಾಶ ನೀಡಬಾರದು, ನಿರ್ದಿಷ್ಟ ಟ್ಯಾಕ್ಸಿ ಸ್ಥಳಗಳಲ್ಲಿ ಮಾತ್ರ ಜನರ ಬಳಿ ಟ್ಯಾಕ್ಸಿ ಸೇವೆ ಕೇಳುವಂತಿರಬೇಕು ಎಂದು ಹೇಳಿದ್ದಾರೆ,


ಸುಪ್ರಿಯಾ ಸುಳೆಯವರು ದೂರು ದಾಖಲಿಸಿದ ತಕ್ಷಣ ಆರ್ ಪಿಎಫ್ ಕಾರ್ಯಪ್ರವೃತ್ತವಾಗಿ ಮಲ್ಹೋತ್ರಾನನ್ನು ಹಿಡಿದು ಟಿಕೆಟ್ ಇಲ್ಲದೆ ರೈಲ್ವೆ ನಿಲ್ದಾಣದೊಳಗೆ ಹೋಗಿದ್ದಕ್ಕೆ 260 ರೂಪಾಯಿ ದಂಡ, ಡ್ರೈವಿಂಗ್ ಲೈಸೆನ್ಸ್ ಇಲ್ಲದ್ದಕ್ಕೆ ಮತ್ತು ಯೂನಿಫಾರ್ಮ್ ಧರಿಸದ್ದಕ್ಕೆ ಮತ್ತೆ 400 ರೂಪಾಯಿ ದಂಡ ಹಾಕಿದ್ದು ಮಾತ್ರವಲ್ಲದೆ ಹಲವು ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದಾರೆ. 


ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಇನ್ನು ಮುಂದೆ ಇಂತಹ ಪ್ರಕರಣಗಳಾದ ಹೇಗೆ ನಿಭಾಯಿಸಬೇಕೆಂದು ಆರ್ ಪಿಎಫ್ ಜವಾನರಿಗೆ ಸಲಹೆ ನೀಡುತ್ತೇವೆ ಎಂದು ಆರ್ ಪಿಎಫ್ ಮುಂಬೈ ವಿಭಾಗದ ಹಿರಿಯ ಭದ್ರತಾ ಆಯುಕ್ತ ಕೆ ಕೆ ಆಶ್ರಫ್ ತಿಳಿಸಿದ್ದಾರೆ.


ಆರ್ ಪಿಎಫ್ ಕೂಡಲೇ ಕಾರ್ಯಪ್ರವೃತ್ತವಾಗಿ ಕ್ರಮ ಕೈಗೊಂಡಿದ್ದಕ್ಕೆ ಸುಪ್ರಿಯಾ ಸುಳೆ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com