ವ್ಯಾಪಾರ ಮಂಡಳಿ ಸಭೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್
ವ್ಯಾಪಾರ ಮಂಡಳಿ ಸಭೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್

'ಐನ್‌ಸ್ಟೈನ್ ಗುರುತ್ವಾಕರ್ಷಣೆಯನ್ನು ಕಂಡುಹಿಡಿದರು' ಹೇಳಿಕೆಗೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ 

ದೇಶದ ಆರ್ಥಿಕತೆ ಬಗ್ಗೆ ಪ್ರಧಾನಿ ಮೋದಿಯವರ ನೀತಿಯನ್ನು ಸಮರ್ಥಿಸಿ ದೆಹಲಿಯಲ್ಲಿ ವ್ಯಾಪಾರಿಗಳ ಮಂಡಳಿ ಸಭೆಯಲ್ಲಿ ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಐನ್ ಸ್ಟೈನ್ ನ ಗುರುತ್ವಾಕರ್ಷಣೆಗೆ ಗಣಿತವನ್ನು ಹೋಲಿಸಿ ನೀಡಿದ್ದ ಹೇಳಿಕೆ ನಿನ್ನೆ ಟ್ವಿಟ್ಟರ್ ನಲ್ಲಿ ವ್ಯಾಪಕವಾಗಿ ವೈರಲ್ ಆಗಿ ಸಾಕಷ್ಟು ಟೀಕೆಗಳು, ಹಾಸ್ಯ, ವಂಗ್ಯಮಿಶ್ರಿತ ಪ್ರತಿಕ್ರಿಯೆಗಳು ಕೇಳಿಬಂದಿದ್ದವ

ನವದೆಹಲಿ; ದೇಶದ ಆರ್ಥಿಕತೆ ಬಗ್ಗೆ ಪ್ರಧಾನಿ ಮೋದಿಯವರ ನೀತಿಯನ್ನು ಸಮರ್ಥಿಸಿ ದೆಹಲಿಯಲ್ಲಿ ವ್ಯಾಪಾರಿಗಳ ಮಂಡಳಿ ಸಭೆಯಲ್ಲಿ ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಐನ್ ಸ್ಟೈನ್ ನ ಗುರುತ್ವಾಕರ್ಷಣೆಗೆ ಗಣಿತವನ್ನು ಹೋಲಿಸಿ ನೀಡಿದ್ದ ಹೇಳಿಕೆ ನಿನ್ನೆ ಟ್ವಿಟ್ಟರ್ ನಲ್ಲಿ ವ್ಯಾಪಕವಾಗಿ ವೈರಲ್ ಆಗಿ ಸಾಕಷ್ಟು ಟೀಕೆಗಳು, ಹಾಸ್ಯ, ವಂಗ್ಯಮಿಶ್ರಿತ ಪ್ರತಿಕ್ರಿಯೆಗಳು ಕೇಳಿಬಂದಿದ್ದವು.


ನಂತರ ಅದಕ್ಕೆ ಸ್ವತಃ ಸಚಿವ ಪಿಯೂಷ್ ಗೋಯಲ್ ಅವರೇ ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ.''ನಾನು ನಿರ್ದಿಷ್ಟ ವಿಷಯವನ್ನು ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದ್ದೇನೆ. ದುರದೃಷ್ಟವಶಾತ್ ಕೆಲವು ಸ್ನೇಹಿತರು ಆ ಸಂದರ್ಭವನ್ನು ತೆಗೆದುಹಾಕಿ, ನಾನು ಹೇಳಿರುವುದರಲ್ಲಿ ಒಂದು ಸಾಲನ್ನು ಎತ್ತಿಕೊಂಡು ತುಂಬಾ ಚೇಷ್ಟೆಯ ವಿವರಣೆಯನ್ನು ನೀಡಿದ್ದಾರೆ ಎಂದಿದ್ದಾರೆ.
ಆದರೆ ನಂತರವೂ ಪಿಯೂಷ್ ಅವರು ಐನ್ ಸ್ಟೈನ್ ನ ಸಿದ್ಧಾಂತಕ್ಕೆ ಬದ್ಧರಾಗಿದ್ದರು. 


ಕೇಂದ್ರ ಸಚಿವರ ಈ ಹೇಳಿಕೆಗೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ನಿನ್ನೆ ಟ್ವೀಟ್ ಮಾಡಿ,ನ್ಯೂಟನ್ ಈಗಾಗಲೇ ಆ ಕೆಲಸ ಮಾಡಿರುವುದರಿಂದ ಐನ್ ಸ್ಟೈನ್ ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ಗಣಿತದ ಅಗತ್ಯವಿರಲಿಲ್ಲ. ಇನ್ನು ನ್ಯೂಟನ್ ಗೆ ಮೊದಲೇ ನಮ್ಮ ಪೂರ್ವಜರು ಗುರುತ್ವಾಕರ್ಷಣೆ ಬಗ್ಗೆ ಎಲ್ಲವೂ ತಿಳಿದುಕೊಂಡಿದ್ದರು ಎಂದು ಮಾನವ ಸಂಪನ್ಮೂಲ ಸಚಿವರು ಹೇಳಿತ್ತಾರೆ ಕಾಯುತ್ತಿರಿ, ಅಥವಾ ಈಗಾಗಲೇ ಹೇಳಿದ್ದಾರೆಯೇ, ಇಂತಹ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಂಡು ನಮ್ಮ ದೇಶದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com