ಎಸ್ಐಟಿಯಿಂದ ಮಾಜಿ ಕೇಂದ್ರ ಸಚಿವ ಚಿನ್ಮಾಯಾನಂದ್ 7 ಗಂಟೆ ವಿಚಾರಣೆ

ಕಾನೂನು ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಾಯಾನಂದ್ ಅವರನ್ನು ಶಹಜಹಾನ್ ಪುರ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಏಳು ಗಂಟೆ ವಿಚಾರಣೆ ನಡೆಸಿದೆ.
ಚಿನ್ಮಯಾನಂದ
ಚಿನ್ಮಯಾನಂದ

ಶಾಹಜಾನ್ ಪುರ್:  ಕಾನೂನು ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಾಯಾನಂದ್ ಅವರನ್ನು ಶಹಜಹಾನ್ ಪುರ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಏಳು ಗಂಟೆ ವಿಚಾರಣೆ ನಡೆಸಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ನಗರ ಬಿಟ್ಟು ಹೊರಗೆ ಹೋಗದಂತೆ  ಸೂಚನೆ ನೀಡಲಾಗಿದೆ.  

ಬಿಜೆಪಿ ನಾಯಕನ ವಿಚಾರಣೆಯ ನಂತರ ಆಶ್ರಮದೊಳಗಿನ ಅವರ 'ದಿವ್ಯಾ ಧಾಮ್' ನಿವಾಸಕ್ಕೆ ಬೀಗ ಹಾಕಿದೆ. ಇಂದೂ ಸಹ ವಿಚಾರಣೆಗೆ ಮುಂದುವರಿಯುವ ಸಾದ್ಯತೆಯಿದೆ ಎನ್ನಲಾಗಿದೆ. 

ಅವರ ಆಶ್ರಮದೊಳಗಿನ  ಮಲಗುವ ಕೋಣೆಯನ್ನು ವಿಧಿವಿಜ್ಞಾನ ತಂಡ ಪರಿಶೀಲಿಸುತ್ತದೆ ಎಂದು ಇಲ್ಲಿನ ಮೂಲಗಳು ತಿಳಿಸಿವೆ. ಬಿಜೆಪಿ ನಾಯಕನ ಆಶ್ರಮ ನಡೆಸುತ್ತಿರುವ ಎಸ್‌ಎಸ್ ಕಾಲೇಜಿನ ಅವಿನಾಶ್ ಮಿಶ್ರಾ ಮತ್ತು ಎಸ್‌ಎಸ್ ಕಾನೂನು ಕಾಲೇಜಿನ  ಡಾ.ಸಂಜಯ್ ಕುಮಾರ್ ಬರ್ನ್‌ವಾಲ್ ಅವರನ್ನು ಸಹ ಎಸ್‌ಐಟಿ ತಂಡ ಗುರುವಾರ ವಿಚಾರಣೆಗೆ ಒಳಪಡಿಸಿದೆ. 
  
ಚಿನ್ಮಯಾನಂದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ  ಕಾನೂನು ವಿದ್ಯಾರ್ಥಿನಿ, ಶಹಜಹಾನಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಇಂದ್ರ ವಿಕ್ರಮ್ ಸಿಂಗ್ ಮುಂದೆ ಪ್ರಕರಣ ವಾಪಸ್ ಪಡೆಯಬೇಕೆಂದು ಕುಟುಂಬ ಸದಸ್ಯರ ಮೇಲೆ ಬೆದರಿಕೆಯ ಒತ್ತಡ ಹಾಕಲಾಗಿದೆ ಎಂದು  ಆರೋಪಿಸಿದ್ದರು.

72 ವರ್ಷದ ಚಿನ್ಮಯಾನಂದ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು  ಆರೋಪಿಸಿ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು, ಮಾಜಿ ಕೇಂದ್ರ ಸಚಿವರ ವಕೀಲರು ಇದನ್ನು ಬ್ಲ್ಯಾಕ್ ಮೇಲ್ ಮಾಡುವ ಪಿತೂರಿ ಎಂದು ಪ್ರತಿಯಾಗಿ ಆರೋಪಿಸಿದ್ದರು.

ಸಂತ ಸಮುದಾಯದ ಹಿರಿಯ ಮುಖಂಡರೊಬ್ಬರು ಕಿರುಕುಳ ನೀಡುತ್ತಿದ್ದು  ಕೊಲ್ಲುವ  ಬೆದರಿಕೆ ಹಾಕುತ್ತಿದ್ದಾನೆ ಎಂದು  ಆರೋಪಿಸಿ, ಆಕೆ ಕಳೆದ  24 ರಂದು ಕಾನೂನು ವಿದ್ಯಾರ್ಥಿನಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಒಂದು ದಿನದ ನಂತರ ಆಕೆ ನಾಪತ್ತೆಯಾಗಿದ್ದರು 

ನಂತರ ಆಕೆ ರಾಜಸ್ಥಾನದಲ್ಲಿ ಪತ್ತೆಯಾದ ಸುಪ್ರಿಂಕೋರ್ಟಿನ ಮುಂದೆ ಹಾಜರಾಗಿದ್ದಳು ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸುವಂತೆ ಕಳೆದ ಸೆ. 2 ರಂದು ಉನ್ನತ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com