ಹ್ಯಾಂಡ್ ಕವರ್, ನೀರಿನ ಬಾಟಲಿ ಸೇರಿದಂತೆ 12 ರೀತಿಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ?

ಪ್ಲಾಸ್ಟಿಕ್ ಮಹಾಮಾರಿ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಇದರ ಮೊದಲ ಹಂತವಾಗಿ ಹ್ಯಾಂಡ್ ಕವರ್, ನೀರಿನ ಬಾಟಲಿ ಸೇರಿದಂತೆ 12 ರೀತಿಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇದ ಹೇರಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ, ಶೀಘ್ರದಲ್ಲೇ ನಿರ್ಣಯ ಘೋಷಣೆ

ನವದೆಹಲಿ: ಪ್ಲಾಸ್ಟಿಕ್ ಮಹಾಮಾರಿ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಇದರ ಮೊದಲ ಹಂತವಾಗಿ ಹ್ಯಾಂಡ್ ಕವರ್, ನೀರಿನ ಬಾಟಲಿ ಸೇರಿದಂತೆ 12 ರೀತಿಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇದ ಹೇರಲು ಮುಂದಾಗಿದೆ.

ಈ ಹಿಂದೆ ನಡೆದ ಸ್ವತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, ಇದೀಗ ಅದನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಅದರಂತೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಮೂಲಗಳ ಪ್ರಕಾರ, ಸಿಗರೇಟ್ ಬಟ್ಸ್, ಹ್ಯಾಂಡ್ ಕವರ್, ನೀರಿನ ಬಾಟಲಿ ಸೇರಿದಂತೆ 12 ರೀತಿಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇದ ಹೇರಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ ಎನ್ನಲಾಗಿದೆ.

ಈ ಕುರಿತಂತೆ ಈಗಾಗಲೇ ತನ್ನ ಪ್ರಸ್ತಾವವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ರವಾನಿಸಿದ್ದು, ಅದರಂತೆ ಒಟ್ಟು 12 ರೀತಿಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ಮತ್ತು ಬಳಕೆ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಲು ಮುಂದಾಗಿದೆ.

ಯಾವ ಯಾವ ವಸ್ತುಗಳು ನಿಷೇಧ
ಹ್ಯಾಂಡ್ ಕವರ್ (50 ಮೈಕ್ರಾನ್ ಗಿಂತ ಕೆಳಗಿನದ್ದು), ನಾನ್ ಒವೆನ್ ಕ್ಯಾರಿ ಬ್ಯಾಗ್ ಗಳು, ಪೊಟ್ಟಣಕ್ಕೆ ಬಳಸಲಾಗುವು ಕವರ್ ಗಳು, ಸ್ಟ್ರಾಗಳು, ಫೋಮ್ಡ್ ಕಪ್ ಗಳು, ಪ್ಲಾಸ್ಟಿಕ್ ಕಪ್ ಗಳು, ಪ್ಲಾಸ್ಟಿಕ್ ನೀರಿನ ಗ್ಲಾಸ್ ಗಳು, ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಬಿಲ್ ಗಳು, ಬೋರ್ಡ್ ಗಳು, ಬೇಕರಿ ತಿನಿಸುಗಳ ಹಾಕುವ ಸಣ್ಣ ಪ್ಲಾಸ್ಟಿಕ್ ಕಪ್ ಗಳು ಮತ್ತು ಪಾತ್ರೆಗಳು (150 ಮಿಲಿ ಮತ್ತು 5 ಗ್ರಾಂ ಕ್ಕಿಂತ ಕಡಿಮೆ); ಕಿವಿ ಮೊಗ್ಗುಗಳು, ಆಕಾಶಬುಟ್ಟಿಗಳು, ಧ್ವಜಗಳು ಮತ್ತು ಮಿಠಾಯಿಗಳ ಹಾಕಲು ಬಳಸುವ ಟ್ರಾನ್ಸ್ ಪರೆಂಟ್ (ಪಾರದರ್ಶಕ) ಪ್ಲಾಸ್ಟಿಕ್ ಕವರ್ ಗಳು; ಸಿಗರೇಟ್ ಬಟ್ಸ್ ಗಳು, ಪಾನೀಯಗಳಿಗಾಗಿ ಬಳಸುವ ಗ್ಲಾಸ್ ಗಳು(200 ಮಿಲಿಗಿಂತ ಕಡಿಮೆ) ಮತ್ತು ರಸ್ತೆಬದಿಯ ಬ್ಯಾನರ್‌ಗಳು (100 ಮೈಕ್ರಾನ್‌ಗಳಿಗಿಂತ ಕಡಿಮೆ) ಸೇರಿದಂತೆ ಒಟ್ಟು 12 ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಇನ್ನು ತಮ್ಮ ಈ ನಿರ್ಧಾರದ ಕುರಿತು ಆಕ್ಷೇಪಣೆಗಳಿದ್ದರೆ ಕೂಡಲೇ ಸಲ್ಲಿಸುವಂತೆ ಪ್ಲಾಸ್ಟಿಕ್ ಕಂಪನಿಗಳಿಗೆ ಸೂಚನೆ ನೀಡುವಂತೆಯೂ ಕೇಂದ್ರ ಸರ್ಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ.

2022ರ ವೇಳೆಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಡಲಿದೆ ಎಂದು ಈ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು. ಅಲ್ಲದೆ ಈ ಕುರಿತಂತೆ ಸಲಹೆಗಳ ಕಳುಹಿಸುವಂತೆಯೇ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com