'ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಿದ ದಿನ': 'ಹಿಂದಿ ದಿವಸ್' ಶುಭ ಕೋರಿದ ಕಾಂಗ್ರೆಸ್

ಕಾಂಗ್ರೆಸ್ ನ ಹಿರಿಯ ರಾಷ್ಟ್ರೀಯ ನಾಯಕರು ಹಿಂದಿ ದಿವಸ್ ನಿಮಿತ್ತ ದೇಶದ ಜನತೆಗೆ ಶುಭಕೋರಿದ್ದಾರೆ.
ಹಿಂದಿ ದಿವಸ್-ಕಾಂಗ್ರೆಸ್
ಹಿಂದಿ ದಿವಸ್-ಕಾಂಗ್ರೆಸ್

ನವದೆಹಲಿ: ಕಾಂಗ್ರೆಸ್ ನ ಹಿರಿಯ ರಾಷ್ಟ್ರೀಯ ನಾಯಕರು ಹಿಂದಿ ದಿವಸ್ ನಿಮಿತ್ತ ದೇಶದ ಜನತೆಗೆ ಶುಭಕೋರಿದ್ದಾರೆ.

ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರದ ಮೋದಿ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಸರಣಿ ಟ್ವೀಟ್ ಮಾಡಿದ ಬೆನ್ನಲ್ಲೇ, ಅತ್ತ ಇದೇ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಿಂದಿ ದಿವಸ್ ನಿಮಿತ್ತ ಶುಭ ಕೋರಲಾಗಿದೆ. 

'ನಿಮ್ಮೆಲ್ಲರಿಗೂ ಹಿಂದಿ ದಿನಾಚರಣೆಯ ಶುಭಾಶಯಗಳು. ಇಂದು, ಐತಿಹಾಸಿಕ ದಿನದಂದು ಹಿಂದಿಗೆ ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಲಾಯಿತು' ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. 

ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿ ಮಾತ್ರವಲ್ಲದೇ, ಆ ಪಕ್ಷದ ಹಿರಿಯ ಮುಖಂಡರಾದ ಜ್ಯೋತಿರಾಧಿತ್ಯ ಸಿಂದ್ಯಾ, ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಮತ್ತು ಮಾಜಿ ಕೇಂದ್ರ ಸಚಿವ ಸಚಿನ್ ಪೈಲಟ್ ಕೂಡ ಹಿಂದಿ ದಿವಸ್ ನಿಮಿತ್ತ ಶುಭ ಕೋರಿದ್ದಾರೆ. 

ನಮ್ಮ ಭಾವನೆಗಳನ್ನು ಪರಸ್ಪರ ತಿಳಿಸುವ ಸರಳ ವಿಧಾನ ಹಿಂದಿ. ಎಲ್ಲಾ ದೇಶವಾಸಿಗಳಿಗೆ ವಿಶ್ವ ಹಿಂದಿ ದಿನಾಚರಣೆಯ ಶುಭಾಶಯಗಳು ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂದ್ಯಾ ಟ್ವೀಟ್ ಮಾಡಿದ್ದಾರೆ. 

ಆಸೆ ಮತ್ತು ಅಭಿಲಾಷೆ ಎಲ್ಲವನ್ನೂ ಒಂದುಗೂಡಿಸುವ ಭಾಷೆ ಹಿಂದಿ. ಹಿಂದಿ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಎಲ್ಲ ಬರಹಗಾರರು, ಕವಿಗಳು ಮತ್ತು ಪತ್ರಕರ್ತರಿಗೆ, ದೇಶವಾಸಿಗಳಿಗೆ ಹಿಂದಿ ದಿನಾಚರಣೆಯ ಶುಭಾಶಯಗಳು ಎಂಜು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಹಿಂದಿ ದಿನಾಚರಣೆಯ ಶುಭಾಶಯಗಳು..ಹಿಂದಿ ನಮ್ಮ ಅಧಿಕೃತ ಭಾಷೆ ಮತ್ತು ಇದು ನಮ್ಮ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com