ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅಧಿಕೃತ ನಿವಾಸದಲ್ಲಿನ ಶ್ವಾನ ಮರಣ, ಪಶುವೈದ್ಯರ ವಿರುದ್ಧ ಪ್ರಕರಣ ದಾಖಲು 

ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿನ  11 ತಿಂಗಳ ಸಾಕು   ನಾಯಿ ಮರಣವನ್ನಪ್ಪಿದೆ. ಈ ಶ್ವಾನ ಪೋಷಣೆ ಮಾಡುತ್ತಿದ್ದವರು ನೀಡಿದ ದೂರಿನ ಹಿನ್ನೆಲೆಯಲ್ಲಿ  ಖಾಸಗಿ ಪಶುವೈದ್ಯರ ವಿರುದ್ಧ ಖಾಸಗಿ ಪಶು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದ್ರಾಬಾದ್: ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿನ  11 ತಿಂಗಳ ಸಾಕು   ನಾಯಿ ಮರಣವನ್ನಪ್ಪಿದೆ. ಈ ಶ್ವಾನ ಪೋಷಣೆ ಮಾಡುತ್ತಿದ್ದವರು ನೀಡಿದ ದೂರಿನ ಹಿನ್ನೆಲೆಯಲ್ಲಿ  ಖಾಸಗಿ ಪಶುವೈದ್ಯರ ವಿರುದ್ಧ ಖಾಸಗಿ ಪಶು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಐಪಿಸಿ ಸೆಕ್ಷನ್ 429  ಮತ್ತು1960ರ ಪ್ರಾಣಿ ಹತ್ಯೆ ತಡೆ ಕಾಯ್ದೆ ಸೆಕ್ಷನ್ 11(4) ರ ಅಡಿಯಲ್ಲಿ ಪಶು ವೈದ್ಯ ರಂಜಿತ್ ವಿರುದ್ಧ ಬಂಜಾರ ಹಿಲ್ಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿನ ನಾಯಿಗಳನ್ನು ಅಸಿಫ್ ಆಲಿ ಸೇರಿದಂತೆ 9 ಕ್ಕೂ ಹೆಚ್ಚು ಮಂದಿ ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ 11 ತಿಂಗಳ ಹಾಸ್ಕಿ ಹೆಸರಿನ ಶ್ವಾನ ಅನಾರೋಗ್ಯಕ್ಕೊಳಗಾಗಿದ್ದು, ಆಹಾರವನ್ನು ತ್ಯಜಿಸಿದೆ. ಈ ಮಾಹಿತಿ ತಿಳಿದ ನಂತರ ಶ್ವಾನ ನೋಡಿಕೊಳ್ಳುತ್ತಿದ್ದ ಅಲಿ ಖಾನ್ ಸ್ಥಳಕ್ಕೆ ಭೇಟಿ ನೀಡಿದ್ದಾಗ ಅದು ಜ್ವರದಿಂದ ನರಳುತ್ತಿರುವುದು ಕಂಡುಬಂದಿದೆ. 

ತದನಂತರ ಅಲಿಖಾನ್ ಆ ಶ್ವಾನವನ್ನು ಬಂಜಾರ ಹಿಲ್ಸ್  ಬಳಿಯ ಡಾಕ್ಟರ್ ರಂಜಿತ್ ಬಳಿಗೆ ಕರೆದುಕೊಂಡು ಹೋಗಿದ್ದು, ಡಾಕ್ಟರ್ ಇಂಜೆಕ್ಷನ್ ನೀಡಿದ ಕೂಡಲೇ ಆ ಶ್ವಾನ ಮೃತಪಟ್ಟಿದೆ.

ಡಾಕ್ಟರ್ ನಿರ್ಲಕ್ಷ್ಯದಿಂದಾಗಿ ಶ್ವಾನು  ಮೃತಪಟ್ಟಿದೆ ಎಂದು ಆರೋಪಿಸಿ ಅಲಿಖಾನ್ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com