ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲಾ ತಂದೆ, ನಿವೃತ್ತ ಐಎಎಸ್​ ಅಧಿಕಾರಿ ಯುಗಂಧರ್​ ನಿಧನ

ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲಾ ಅವರ ತಂದೆ, ನಿವೃತ್ತ ಐಎಎಸ್​ ಅಧಿಕಾರಿ ಬಿ.ಎನ್. ಯುಗಂಧರ್​(82) ಅವರು ಶುಕ್ರವಾರ ಹೈದರಾಬಾದ್​ನಲ್ಲಿ ನಿಧನರಾಗಿದ್ದಾರೆ.

Published: 14th September 2019 01:10 AM  |   Last Updated: 14th September 2019 01:10 AM   |  A+A-


yugandar

ಬಿ.ಎನ್. ಯುಗಂಧರ್

Posted By : Lingaraj Badiger
Source : PTI

ಹೈದರಾಬಾದ್​: ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲಾ ಅವರ ತಂದೆ, ನಿವೃತ್ತ ಐಎಎಸ್​ ಅಧಿಕಾರಿ ಬಿ.ಎನ್. ಯುಗಂಧರ್​(82) ಅವರು ಶುಕ್ರವಾರ ಹೈದರಾಬಾದ್​ನಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯುಗಂಧರ್ ಅವರು ಇಂದು ಮಧ್ಯಾಹ್ನ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಯುಗಂಧರ್ ಅವರ ಪತ್ನಿ ಈ ಮೊದಲೇ ನಿಧನರಾಗಿದ್ದು, ಸತ್ಯ ನಾಡೆಲ್ಲ ಅವರು ಏಕೈಕ ಪುತ್ರ.

1962ನೇ ಬ್ಯಾಚಿನ ಐಎಎಸ್​ ಅಧಿಕಾರಿಯಾದ ಯುಗಂಧರ್ ಅವರು ಪಿ.ವಿ.ನರಸಿಂಹರಾವ್​ ಸರ್ಕಾರದಲ್ಲಿ ಪ್ರಧಾನಮಂತ್ರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.

ಮುಸ್ಸೂರಿಯ ಲಾಲ್​ ಬಹದ್ದೂರ್ ಶಾಸ್ತ್ರಿ ನ್ಯಾಷನಲ್​ ಆಕಾಡೆಮಿ ಆಫ್​ ಅಡ್ಮಿನಿಸ್ಟ್ರೇಷನ್​ನ ನಿರ್ದೇಶಕರಾಗಿಯೂ ಯುಗಂಧರ್ ಅವರು ಸೇವೆ ಸಲ್ಲಿಸಿದ್ದರು.

2004-09ರ ಅವಧಿಯಲ್ಲಿ ಯೋಜನಾ ಆಯೋಗದ ಸದಸ್ಯರಾಗಿ ಮತ್ತು​ ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಯುಗಂಧರ್​ ಕಾರ್ಯನಿರ್ವಹಿಸಿದ್ದರು.

ಯುಗಂಧರ್​ ಅವರ ಸಾವಿಗೆ ಹಲವು ಐಎಎಸ್​ ಅಧಿಕಾರಿಗಳು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್​ ಅವರು ಯುಗಾಂಧರ್​ ಅವರ ಸರಳತೆ, ಪ್ರಾಮಾಣಿಕತೆ ವೃತ್ತಬದ್ಧತೆಯನ್ನು ಸ್ಮರಿಸಿಕೊಂಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp