ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡದ 82 ಮಾಜಿ ಸಂಸದರು

ಲೋಕಸಭೆ ಹೌಸಿಂಗ್ ಸಮಿತಿಯ ಕಠಿಣ ಎಚ್ಚರಿಕೆಯ ನಡುವೆಯೂ ಇನ್ನು 82 ಮಾಜಿ ಸಂಸದರು ದೆಹಲಿಯ ಲುಟಿಯನ್ಸ್ ನ ಸರ್ಕಾರಿ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಸಂಸತ್ತು
ಸಂಸತ್ತು

ನವದೆಹಲಿ: ಲೋಕಸಭೆ ಹೌಸಿಂಗ್ ಸಮಿತಿಯ ಕಠಿಣ ಎಚ್ಚರಿಕೆಯ ನಡುವೆಯೂ ಇನ್ನು 82 ಮಾಜಿ ಸಂಸದರು ದೆಹಲಿಯ ಲುಟಿಯನ್ಸ್ ನ ಸರ್ಕಾರಿ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಇಂತಹ ಮಾಜಿ ಸಂಸದರನ್ನು ಆದಷ್ಟು ಬೇಗ ಹೊರಹಾಕಲು ಸಾರ್ವಜನಿಕ ಆವರಣದಲ್ಲಿ ಅನಧಿಕೃತ ನಿವಾಸಿಗಳ ಹೊರಹಾಕುವಿಕೆ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದೆ. 

ಮೂರು ದಿನಗಳೊಳಗೆ ಸರ್ಕಾರಿ ಬಂಗಲೆ ತೆರವುಗೊಳಿಸದಿದ್ದಲ್ಲಿ ವಿದ್ಯುತ್, ನೀರು, ಗ್ಯಾಸಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಸಿ ಆರ್ ಪಾಟೀಲ್ ನೇತೃತ್ವದ ಲೋಕಸಭೆ ಹೌಸಿಂಗ್ ಸಮಿತಿ ಆಗಸ್ಟ್ 19ರಂದೇ ಎಚ್ಚರಿಕೆ ನೀಡಿತ್ತು.

ಆದರೆ, ಸಮಿತಿ ಆದೇಶ ನೀಡಿದ್ದರೂ 82 ಮಾಜಿ ಸಂಸದರು ಇನ್ನೂ ಸರ್ಕಾರಿ ಅಧಿಕೃತ ಬಂಗಲೆಗಳನ್ನು ತೆರವುಗೊಳಿಸಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸರ್ಕಾರಿ ಬಂಗಲೆ ಖಾಲಿ ಮಾಡದ ಮಾಜಿ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಸಭಾ ಹೌಸಿಂಗ್ ಸಮಿತಿ ಎಚ್ಚರಿಕೆ ನೀಡಿದೆ.  

ಮಾಜಿ ಸಂಸದರು ಸರ್ಕಾರಿ ಬಂಗಲೆ ತೆರವುಗೊಳಿಸಲಾಗಿದೆ ಮಾಜಿ ಸಂಸದರಿಗೆ ಸೂಚನೆ ನೀಡಲಾಗಿದೆ. ಆದಾಗ್ಯೂ, ಕೆಲವರು ಇನ್ನೂ ಖಾಲಿ ಮಾಡಿಲ್ಲ, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ಹೇಳಿದೆ. 

2014ರಲ್ಲಿ ನೀಡಲಾಗಿರುವ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಮಾಜಿ ಸಂಸದರಿಗೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಖಾಲಿ ಮಾಡದಿದ್ದಲ್ಲಿ ಸಾರ್ವಜನಿಕ ಆವರಣದಲ್ಲಿ ಅನಧಿಕೃತ ನಿವಾಸಿಗಳ ಹೊರಹಾಕುವಿಕೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com