ಅಮಿತ್ ಶಾ 'ಹಿಂದಿ' ಪ್ರೇಮ: ಹಿಂದಿ ಜೊತೆಗೆ ಪ್ರಾದೇಶಿಕ ಭಾಷೆಗಳು ಮುಖ್ಯ ಎಂದ ಕೇಂದ್ರ ಸಚಿವ ಪಾಸ್ವಾನ್!
ಭಾರತದ ಎಲ್ಲಾ ನ್ಯಾಯಾಲಯಗಳು ಹಿಂದಿಯಲ್ಲಿ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಕೆಲಸ ಮಾಡಬೇಕೇ ಹೊರತು ಇಂಗ್ಲಿಷ್‌ನಲ್ಲಿ ಅಲ್ಲ ಎಂದು ಎನ್‌ಡಿಎ ಸರ್ಕಾರದ ಮಿತ್ರ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಶನಿವಾರ ಒತ್ತಾಯಿಸಿದ್ದಾರೆ.
Published: 15th September 2019 12:06 AM | Last Updated: 15th September 2019 12:14 AM | A+A A-

ರಾಮ್ ವಿಲಾಸ್ ಪಾಸ್ವಾನ್
ನವದೆಹಲಿ: ಭಾರತದ ಎಲ್ಲಾ ನ್ಯಾಯಾಲಯಗಳು ಹಿಂದಿಯಲ್ಲಿ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಕೆಲಸ ಮಾಡಬೇಕೇ ಹೊರತು ಇಂಗ್ಲಿಷ್‌ನಲ್ಲಿ ಅಲ್ಲ ಎಂದು ಎನ್‌ಡಿಎ ಸರ್ಕಾರದ ಮಿತ್ರ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಶನಿವಾರ ಒತ್ತಾಯಿಸಿದ್ದಾರೆ.
ಇಲ್ಲಿ ಹಿಂದಿ ದಿವಾಸ್ ಸಂದರ್ಭದಲ್ಲಿ ಮಾತನಾಡಿದ ಮೋದಿ ಸರ್ಕಾರದ ಸಂಪುಟದಲ್ಲಿ ಕೇಂದ್ರ ಸಚಿವರಾದ ಪಾಸ್ವಾನ್, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿನ ಇಂಗ್ಲಿಷ್ ಭಾಷೆಯ ಕಡ್ಡಾಯವನ್ನು ರದ್ದುಪಡಿಸಬೇಕು ಮತ್ತು ಸಾಂವಿಧಾನಿಕ ತಿದ್ದುಪಡಿ ಮೂಲಕ ಎಲ್ಲಾ ನ್ಯಾಯಾಂಗ ನ್ಯಾಯಾಲಯಗಳು ಪ್ರಾದೇಶಿಕ ಭಾಷೆಗಳಲ್ಲಿ ಕೆಲಸ ಮಾಡುವಂತೆ ಕೇಳಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯದ 72 ವರ್ಷಗಳ ನಂತರ, ಇಂಗ್ಲಿಷ್ ಭಾಷೆಯ ಬಳಕೆ ಹೆಚ್ಚುತ್ತಿದೆ ಮತ್ತು ಹಿಂದಿ ಮತ್ತು ಇತರ ಭಾಷೆಗಳ ಸ್ಥಾನವು ಪ್ರತಿದಿನ ಕ್ಷೀಣಿಸುತ್ತಿದೆ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಎಲ್ಜೆಪಿ ಮುಖ್ಯಸ್ಥರು ಹೇಳಿದರು.