'ಬಿನ್ ಲಾಡೆನ್ ಪುತ್ರನ ಸಾವಿನ ಮೂಲಕ ಪಾಕ್ ಗೆ ಅಮೆರಿಕ ಯಾವುದೇ ಮಾನ್ಯತೆ ನೀಡಲ್ಲ ಎಂಬುದು ಸಾಬೀತು'

ಕುಖ್ಯಾತ ಉಗ್ರ ಬಿನ್ ಲಾಡೆನ್ ಪುತ್ರನನ್ನು ಕೊಂದು ಹಾಕುವ ಮೂಲಕ ಪಾಕಿಸ್ತಾನಕ್ಕೆ ತಾನು ಯಾವುದೇ ರೀತಿಯ ಮಾನ್ಯತೆ ನೀಡುವುದಿಲ್ಲ ಎಂಬುದನ್ನು ಅಮೆರಿಕ ಸಾಬೀತುಪಡಿಸಿದೆ ಎಂದು ಗುಪ್ತಚರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕುಖ್ಯಾತ ಉಗ್ರ ಬಿನ್ ಲಾಡೆನ್ ಪುತ್ರನನ್ನು ಕೊಂದು ಹಾಕುವ ಮೂಲಕ ಪಾಕಿಸ್ತಾನಕ್ಕೆ ತಾನು ಯಾವುದೇ ರೀತಿಯ ಮಾನ್ಯತೆ ನೀಡುವುದಿಲ್ಲ ಎಂಬುದನ್ನು ಅಮೆರಿಕ ಸಾಬೀತುಪಡಿಸಿದೆ ಎಂದು ಗುಪ್ತಚರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅತ್ತ ಅಮೆರಿಕ ಅಧ್ಯಕ್ಷ ಟ್ರಂಪ್, ಹಮ್ಜಾ ಸಾವಿನ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಭಾರತದ ರಕ್ಷಣಾ ತಜ್ಞರು, ಹಮ್ಜಾ ಬಿನ್ ಲಾಡೆನ್ ಪಾಕಿಸ್ತಾನ ಸೇನೆಯ ರಕ್ಷಣೆಯಲ್ಲಿದ್ದ. ಆದರೆ ಆತನನ್ನು ಹುಡುಕಿ ಕೊಲ್ಲುವ ಮೂಲಕ ಪಾಕಿಸ್ತಾನಕ್ಕೆ ತಾನು ಯಾವುದೇ ರೀತಿಯ ಮಾನ್ಯತೆ ನೀಡುವುದಿಲ್ಲ ಎಂಬುದನ್ನು ಅಮೆರಿಕ ಸಾಬೀತುಪಡಿಸಿದೆ. ಇದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಹಿನ್ನಡೆಯಾಗಿದೆ ಎಂದು ರಕ್ಷಣಾ ತಜ್ಞ ಎಸ್ ಪಿ ಸಿನ್ಹಾ ಹೇಳಿದ್ದಾರೆ.

ಅಂತೆಯೇ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಪಾಕಿಸ್ತಾನದ ಮೇಲೆ ಎಷ್ಟೇ ಒತ್ತಡ ಹೇರಿದರೂ ತಲೆ ಕೆಡಿಸಿಕೊಳ್ಳದ ಪಾಕಿಸ್ತಾನಕ್ಕೆ ಅಮೆರಿಕ ಈ ಮೂಲಕ ಖಡಕ್ ಉತ್ತರ ನೀಡಿದ್ದು, ನೀವು ಕ್ರಮ ಕೈಗೊಳ್ಳದಿದ್ದರೇ ನಾವೇ ಕೈಗೊಳ್ಳುತ್ತೇವೆ ಎಂದು ಸಾಬೀತು ಮಾಡಿದೆ. ಅಮೆರಿಕದ ಈ ನಡೆ ಪಾಕಿಸ್ತಾನದ ಜಂಘಾಬಲವನ್ನೇ ಉಡುಗುವಂತೆ ಮಾಡಿದೆ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,  ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಒಸಾಮಾ ಬಿನ್ ಲಾಡೆನ್ ಅವರ ಉತ್ತರಾಧಿಕಾರಿ ಮತ್ತು ಅಲ್-ಖೈದಾ ಭಯೋತ್ಪಾದಕ ಸಂಘಟನೆಯ ಪ್ರಮುಖ ಸದಸ್ಯ ಹಮ್ಜಾ ಅವರ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದ್ದಾರೆ. ಅಫ್ಘಾನಿಸ್ತಾನ / ಪಾಕಿಸ್ತಾನ ಪ್ರದೇಶದಲ್ಲಿ ಅಮೆರಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅಲ್-ಖೈದಾ ಸದಸ್ಯ ಮತ್ತು ಒಸಾಮಾ ಬಿನ್ ಲಾಡೆನ್‌ ಅವರ ಮಗ ಹಮ್ಜಾ ಬಿನ್ ಲಾಡೆನ್ ಹತ್ಯೆಗೊಂಡಿದ್ದಾನೆ. ಹಮ್ಜಾ ಬಿನ್ ಲಾಡೆನ್ ಅವರ ನಷ್ಟವು ಅಲ್-ಖೈದಾಗೆ ಪ್ರಮುಖ ನಾಯಕನನ್ನು ಕಳೆದುಕೊಂಡಿರುವುದು ಮಾತ್ರವಲ್ಲ. ಅವರ ತಂದೆಯ ಸಾಂಕೇತಿಕ ಸಂಪರ್ಕವನ್ನು ಕಳೆದುಕೊಂಡಿದೆ. ಆದರೆ ಗುಂಪಿನ ಪ್ರಮುಖ ಕಾರ್ಯಾಚರಣೆಯ ಚಟುವಟಿಕೆಗಳನ್ನು ನಾಶಗೊಳಿಸಲಿದೆ. ವಿವಿಧ ಭಯೋತ್ಪಾದಕ ಗುಂಪುಗಳ ಯೋಜನೆ ಮತ್ತು ವ್ಯವಹಾರದ ಜವಾಬ್ದಾರಿಯನ್ನು ಹಮ್ಜಾ ಬಿನ್ ಲಾಡಿನ್ ವಹಿಸಿಕೊಂಡಿದ್ದ ಎಂದು ಟ್ರಂಪ್ ಶ್ವೇತಭವನದ ಪತ್ರಿಕಾ ಕಚೇರಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದರು.

ಈ ಬೇಸಿಗೆಯ ಆರಂಭದಲ್ಲಿ ಹಮ್ಜಾ ಬಿನ್ ಲಾಡೆನ್ ಅವರ ಸಾವು ವರದಿಯಾಗಿತ್ತು. ಆದರೆ ಅಮೆರಿಕ ಅಧಿಕೃತವಾಗಿ ಆ ವರದಿಗಳನ್ನು ದೃಢೀಕರಿಸಿರಲಿಲ್ಲ ಅಥವಾ ನಿರಾಕರಿಸಲಿಲ್ಲ. ಇದೀಗ ಸ್ವತಃ ಅಮೆರಿಕ ಅಧ್ಯಕ್ಷರೇ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com