ಮಂಡಿಗಿಂತ ಉದ್ಧದ ಕುರ್ತಿ ಧರಿಸಿದರೆ ಒಳ್ಳೆಯ ಮದುವೆ ಪ್ರಸ್ತಾಪ: ಮಹಿಳಾ ಕಾಲೇಜಿನಲ್ಲಿ ತುಂಡುಡುಗೆ ಬ್ಯಾನ್

ಯುವತಿಯರು ಮಂಡಿ ಮುಚ್ಚುವ ರೀತಿಯ ಉದ್ದನೆ ಕುರ್ತಿಗಳ ಧರಿಸಿದರೆ, ಒಳ್ಳೊಳ್ಳೆ ಮದುವೆ ಪ್ರಸ್ತಾಪಗಳು ಬರುತ್ತದೆ ಎಂದು ಸಲಹೆ ನೀಡಿರುವ ಮಹಿಳಾ ಕಾಲೇಜೊಂದು ವಿದ್ಯಾರ್ಥಿನಿಯರು ತುಂಡುಡುಗೆ ಧರಿಸದಂತೆ ನಿಷೇಧ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್​: ಯುವತಿಯರು ಮಂಡಿ ಮುಚ್ಚುವ ರೀತಿಯ ಉದ್ದನೆ ಕುರ್ತಿಗಳ ಧರಿಸಿದರೆ, ಒಳ್ಳೊಳ್ಳೆ ಮದುವೆ ಪ್ರಸ್ತಾಪಗಳು ಬರುತ್ತದೆ ಎಂದು ಸಲಹೆ ನೀಡಿರುವ ಮಹಿಳಾ ಕಾಲೇಜೊಂದು ವಿದ್ಯಾರ್ಥಿನಿಯರು ತುಂಡುಡುಗೆ ಧರಿಸದಂತೆ ನಿಷೇಧ ಹೇರಿದೆ.

ಹೈದರಾಬಾದ್​ನ ಸೇಂಟ್​ ಫ್ರಾನ್ಸಿಸ್​​ ಮಹಿಳಾ ಕಾಲೇಜು ಇಂತಹುದೊಂದು ಸಲಹೆ ನೀಡಿದ್ದು, ಉದ್ಧನೆಯ ಕುರ್ತಿ ಧರಿಸಿದರೆ ಒಳ್ಳೊಳ್ಳೆ ಮದುವೆ ಪ್ರಸ್ತಾಪಗಳು ಬರುತ್ತದೆ, ಮತ್ತು ನೀವು ಜೀವನದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು  ಸಲಹೆ ನೀಡಿದೆ. ಅಂತೆಯೇ ತನ್ನ ಕಾಲೇಜಿನ ಹೊಸ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದ್ದು, ವಿದ್ಯಾರ್ಥಿನಿಯರು ತುಂಡುಡುಗೆ ಧರಿಸದಂತೆ ನಿಷೇಧ ಹೇರಿದೆ.

ಕಾಲೇಜು ಜಾರಿ ಮಾಡಿರುವ ಈ ವಸ್ತ್ರಸಂಹಿತೆಯ ಪ್ರಕಾರ ಕಾಲೇಜಿಗೆ ಬರುವ ಯುವತಿಯರು ಯಾವುದೇ ಕಾರಣಕ್ಕೂ ಶಾರ್ಟ್ಸ್​, ತೋಳು ಇಲ್ಲದ ಬಟ್ಟೆಗಳನ್ನು ಧರಿಸುವಂತಿಲ್ಲ. ಆದರೆ, ಮಂಡಿ ಉದ್ದದ ತೋಳು ಇಲ್ಲದ ಕುರ್ತಿ ತೊಡಲು ಯಾವುದೇ ನಿರ್ಬಂಧಗಳಿಲ್ಲ ಎಂದು ಕಾಲೇಜು ಪ್ರಾಂಶುಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ವಸ್ತ್ರಸಂಹಿತೆ ಆಗಸ್ಟ್ 1ರಿಂದಲೇ ಜಾರಿಗೆ ಬಂದಿದ್ದು, ಆದರೂ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿನಿಯರು ತಮ್ಮ ನೆಚ್ಚಿನ ಶಾರ್ಟ್ಸ್​ಗಳನ್ನೇ ಧರಿಸಿ ಕಾಲೇಜಿಗೆ ಬರುತ್ತಿದ್ದಂತೆ. ಹಾಗಾಗಿ ಶನಿವಾರ ಶಾರ್ಟ್ಸ್​​ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನ ವಸ್ತ್ರಸಂಹಿತೆ ಪಾಲಿಸಿಲ್ಲ ಎಂದು ಆರೋಪಿಸಿ, ತರಗತಿಗಳಿಗೆ ಹಾಜರಾಗದಂತೆ ತಡೆಯಲಾಗಿದೆ. ಕಾಲೇಜಿನ ಈ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com