ಪಾಕಿಸ್ತಾನದ ಅಲ್ಪ ಸಂಖ್ಯಾತರ ಪರವಾಗಿ ಧನಿ ಎತ್ತಿ: ಮಲಾಲಾಗೆ ಶೋಭಾ ಕರಂದ್ಲಾಜೆ ಸಲಹೆ

ಕಾಶ್ಮೀರದ ಕುರಿತಂತೆ ಟ್ವೀಟ್ ಮಾಡಿ ಆತಂಕ ವ್ಯಕ್ತ ಪಡಿಸಿದ್ದ ಪಾಕಿಸ್ತಾನದ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ಮಲಾಲಾ ಯೂಸುಫ್ ಝೈಗೆ ಕರ್ನಾಟಕದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾಶ್ಮೀರದ ಕುರಿತಂತೆ ಟ್ವೀಟ್ ಮಾಡಿ ಆತಂಕ ವ್ಯಕ್ತ ಪಡಿಸಿದ್ದ ಪಾಕಿಸ್ತಾನದ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ಮಲಾಲಾ ಯೂಸುಫ್ ಝೈಗೆ ಕರ್ನಾಟಕದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ.

ಕಾಶ್ಮೀರದ ವಿಚಾರವಾಗಿ ಈ ಹಿಂದೆ ಟ್ವೀಟ್ ಮಾಡಿದ್ದ ಮಲಾಲಾ, ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ದತಿಯಿಂದಾಗಿ ಕಾಶ್ಮೀರದಲ್ಲಿ ಸಂಘರ್ಷದ ಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷದಲ್ಲಿ  ಹೆಚ್ಚು ಸಮಸ್ಯೆಗೆ ತುತ್ತಾಗುವವರು ಮಹಿಳೆಯರು ಮತ್ತು ಮಕ್ಕಳಾಗಿರುವುದರಿಂದ  ಕಾಶ್ಮೀರಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಮೊದಲು ಪಾಕಿಸ್ತಾನದ ಅಲ್ಪ ಸಂಖ್ಯಾತರ ಧನಿ ಎತ್ತಿ, ಅಲ್ಲಿ ನಡೆಯುವ ಬಲವಂತದ ಮತಾಂತರ ಮತ್ತು ಯುವತಿಯರ ಮೇಲಿನ ಕಿರುಕುಳದ ಕುರಿತು ಧನಿ ಎತ್ತಿ. ಅಲ್ಲಿನ ಯುವತಿಯರು ತಮ್ಮದೇ ನೆಲದಲ್ಲಿ ಆತಂಕದಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರದಲ್ಲಿ ಅಭಿವೃದ್ದಿ ಅಜೆಂಡಾ ವೃದ್ದಿಯಾಗಿದೆಯೇ ಹೊರತು ಅಲ್ಲಿನ ಜನರ ಹಕ್ಕುಗಳಿಗೆ ಯಾವುದೇ ರೀತಿಯ ಚ್ಯುತಿ ಬಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com