ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು; ಹಿಂದಿ ಭಾಷೆಗೆ ಕಾಂಗ್ರೆಸ್ ಪ್ರತಿಕ್ರಿಯೆ 

ದೇಶದಲ್ಲಿ ಹಿಂದಿ ಭಾಷೆಯ ಮಹತ್ವವನ್ನು ಕೇಂದ್ರದ ನಾಯಕರು ನಿನ್ನೆ ಸಾರಿದ ನಂತರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ದೇಶದಲ್ಲಿರುವ ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು ಮತ್ತು ಸಂವಿಧಾನವನ್ನು ರಚಿಸಿದವರು ಇತ್ಯರ್ಥಪಡಿಸಿದ ಭಾವನಾತ್ಮಕ ವಿಷಯಗಳ ಬಗ್ಗೆ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ಹೇಳಿದೆ. 
ಆನಂದ್ ಶರ್ಮ
ಆನಂದ್ ಶರ್ಮ

ನವದೆಹಲಿ: ದೇಶದಲ್ಲಿ ಹಿಂದಿ ಭಾಷೆಯ ಮಹತ್ವವನ್ನು ಕೇಂದ್ರದ ನಾಯಕರು ನಿನ್ನೆ ಸಾರಿದ ನಂತರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ದೇಶದಲ್ಲಿರುವ ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು ಮತ್ತು ಸಂವಿಧಾನವನ್ನು ರಚಿಸಿದವರು ಇತ್ಯರ್ಥಪಡಿಸಿದ ಭಾವನಾತ್ಮಕ ವಿಷಯಗಳ ಬಗ್ಗೆ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ಹೇಳಿದೆ.


ದೇಶದಲ್ಲಿ ಕಲಹ ಮತ್ತು ಅಶಾಂತಿಯನ್ನು ಉಂಟುಮಾಡುವ ಕಾರಣ ತ್ರಿಭಾಷಾ ಸೂತ್ರದ ಬಗ್ಗೆ ಪುನರ್ವಿಮರ್ಶೆ ಮಾಡುವ ಬಗ್ಗೆ ಯಾವುದೇ ಸೂಚನೆ ನೀಡಬಾರದು ಎಂದು ಕಾಂಗ್ರೆಸ್ ಹೇಳಿದೆ.ತ್ರಿಭಾಷಾ ಸೂತ್ರದಡಿ ಹಿಂದಿ, ಇಂಗ್ಲಿಷ್ ಮತ್ತು ಆಯಾ ರಾಜ್ಯಗಳ ಸ್ಥಳೀಯ ಭಾಷೆ ಬರುತ್ತದೆ. 


ನಿನ್ನೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶಕ್ಕೆ ಸಾಮಾನ್ಯವಾದ ಭಾಷೆಯಾಗಿ ಹಿಂದಿ ಭಾಷೆಯಾಗಬೇಕು. ಹಿಂದಿ ಭಾಷೆಯನ್ನು ಬಹುತೇಕರು ಮಾತನಾಡುತ್ತಿದ್ದು ಅದು ದೇಶವನ್ನು ಒಂದುಗೂಡಿಸುತ್ತದೆ ಎಂದಿದ್ದರು.


ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮ, ಶಾ ಅವರ ಮಾತುಗಳು ನಿಜವಾದರೆ ಅಮಿತ್ ಶಾ ಅವರು ಹಿಂದಿ ಅಧಿಕೃತ ಭಾಷೆ ಎಂದು ಬಹಳ ವರ್ಷಗಳ ಹಿಂದೆಯೇ ಘೋಷಿಸಲಾಗಿತ್ತು. ಸಂವಿಧಾನ ವೈವಿಧ್ಯತೆಯನ್ನು ಗೌರವಿಸುತ್ತಿದ್ದು ಅದು 22 ಭಾಷೆಗಳನ್ನು ಗುರುತಿಸಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com