2019ರಲ್ಲಿ ಪಾಕ್‌ನಿಂದ 2,050 ಬಾರಿ ಗುಂಡಿನ ದಾಳಿ 21 ಭಾರತೀಯರ ಸಾವು: ಎಂಇಎ

ಪ್ರಸಕ್ತ ವರ್ಷದಲ್ಲಿ ಪಾಕಿಸ್ತಾನ ಸೇನೆ 2,050 ಬಾರಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು 21 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

Published: 16th September 2019 12:44 AM  |   Last Updated: 16th September 2019 12:44 AM   |  A+A-


Indian Army

ಭಾರತೀಯ ಸೇನೆ

Posted By : Vishwanath S
Source : PTI

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಪಾಕಿಸ್ತಾನ ಸೇನೆ 2,050 ಬಾರಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು 21 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

ಭಾರತದೊಳಗೆ ಉಗ್ರರ ಒಳ ನುಸುಳುವಿಕೆಗೆ ಸಹಾಯ. ಭಾರತೀಯ ನಾಗರಿಕರು ಮತ್ತು ಗಡಿ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಈ ಕುರಿತು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

2003ರ ಒಪ್ಪಂದವನ್ನು ಪಾಲಿಸುವಂತೆ ಮತ್ತು ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಶಾಂತಿ ಕಾಪಾಡುವಂತೆ ನಾವು ಪಾಕಿಸ್ತಾನಕ್ಕೆ ಸಂದೇಶ ಕಳುಹಿಸುತ್ತಲೇ ಇದ್ದೇವೆ. ಈ ರೀತಿಯ ಗುಂಡಿನ ದಾಳಿಗಳನ್ನು ಭಾರತೀಯ ಪಡೆಗಳು ಅತ್ಯಂತ ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿವೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ಮತ್ತು ಗಡಿಯೊಳಗೆ ಉಗ್ರರ ನುಸುಳುವಿಕೆ ಯತ್ನಗಳಿಗೆ ನಾವು ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp