ಕಾಶ್ಮೀರ: ಸಹಜ ಸ್ಥಿತಿ ಮರುಸ್ಥಾಪನೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ: ಖುದ್ದು ಕಾಶ್ಮೀರಕ್ಕೆ ಹೋಗುತ್ತೇನೆಂದ ಸಿಜೆಐ! 

ಆರ್ಟಿಕಲ್ 370 ರದ್ದತಿ ನಂತರ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕಾಶ್ಮೀರ: ಸಾಮಾನ್ಯಸ್ಥಿತಿ ಮರುಸ್ಥಾಪನೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ: ಖುದ್ದು ಕಾಶ್ಮೀರಕ್ಕೆ ಹೋಗುತ್ತೇನೆಂದ ಸಿಜೆಐ!
ಕಾಶ್ಮೀರ: ಸಾಮಾನ್ಯಸ್ಥಿತಿ ಮರುಸ್ಥಾಪನೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ: ಖುದ್ದು ಕಾಶ್ಮೀರಕ್ಕೆ ಹೋಗುತ್ತೇನೆಂದ ಸಿಜೆಐ!

ನವದೆಹಲಿ: ಆರ್ಟಿಕಲ್ 370 ರದ್ದತಿ ನಂತರ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
 
ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಕಾಶ್ಮೀರ ಟೈಮ್ಸ್ ಪತ್ರಿಕೆ ಸಂಪಾದಕರಾದ ಅನುರಾಧಾ ಹಾಗೂ ತೆಹ್ಸೀನ್ ಪೂನಾವಾಲ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.16 ರಂದು ಸುಪ್ರೀಂ ಕೋರ್ಟ್ ನ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ ನಡೆಸಿದೆ. ಈ ವಿಚಾರಣೆಯಲ್ಲಿ ಕೋರ್ಟ್ ಕೇಂದ್ರಕ್ಕೆ ಕಾಶ್ಮೀರದಲ್ಲಿ ಸಾಮಾನ್ಯಸ್ಥಿತಿ ಮರುಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. 

ಕಾಶ್ಮೀರದಲ್ಲಿ ಇನ್ನೂ ಸಂವನಹನ ಸಂಪರ್ಕಗಳನ್ನು ನಿರ್ಬಂಧಿಸಲಾಗಿದೆಯೇಕೆ? ಯಾವ ಕಾರಣಕ್ಕಾಗಿ ಎಂದು ಕೋರ್ಟ್ ಅಟಾರ್ನಿ ಜನರಲ್ ನ್ನು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಟಾರ್ನಿ ಜನರಲ್ ರಾಜ್ಯದಲ್ಲಿ ಎಲ್ಲಾ ಪತ್ರಿಕೆಗಳು ಪ್ರಕಟವಾಗುತ್ತಿದೆ. ಪತ್ರಕರ್ತರಿಗೆ ರಾಜ್ಯದಲ್ಲಿ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.  

ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಮರುಸ್ಥಾಪನೆಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಮಾಣಪತ್ರದಲ್ಲಿ ವಿವರಿಸಬೇಕೆಂದೂ ಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದ್ದು ಅಗತ್ಯವಿದ್ದಲ್ಲಿ ಖುದ್ದಾಗಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com