ಮುಜಾಫರ್ ಪುರ್ ನಿರಾಶ್ರಿತ ಕೇಂದ್ರದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ; ಕೇಸು ದಾಖಲು 

ಕಳೆದ ವರ್ಷ ಲೈಂಗಿಕ ಕಿರುಕುಳ ಆರೋಪದ ಮೇಲೆ ಮುಜಾಫರ್ ಪುರ ನಿರಾಶ್ರಿತ ಕೇಂದ್ರದಿಂದ ಇತರ 33 ಮಂದಿಯೊಂದಿಗೆ ರಕ್ಷಿಸಲ್ಪಟ್ಟ ಹದಿಹರೆಯದ ಬಾಲಕಿ ಮೇಲೆ ಚಲಿಸುತ್ತಿರುವ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕಳೆದ ಶುಕ್ರವಾರ ರಾತ್ರಿ ಬಿಹಾರದಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಕಳೆದ ವರ್ಷ ಲೈಂಗಿಕ ಕಿರುಕುಳ ಆರೋಪದ ಮೇಲೆ ಮುಜಾಫರ್ ಪುರ ನಿರಾಶ್ರಿತ ಕೇಂದ್ರದಿಂದ ಇತರ 33 ಮಂದಿಯೊಂದಿಗೆ ರಕ್ಷಿಸಲ್ಪಟ್ಟ ಹದಿಹರೆಯದ ಬಾಲಕಿ ಮೇಲೆ ಚಲಿಸುತ್ತಿರುವ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕಳೆದ ಶುಕ್ರವಾರ ರಾತ್ರಿ ಬಿಹಾರದಲ್ಲಿ ನಡೆದಿದೆ.


ಮುಜಾಫರ್ ಪುರದ ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ತನ್ನ ಸಂಬಂಧಿಕರ ಮನೆಗೆ 14 ವರ್ಷದ ಬಾಲಕಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ನಾಲ್ವರು ಮುಸುಕುಧಾರಿಗಳು ಬೊಲೆರೊ ವಾಹನಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಏಕಾಂತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ.


ಬಾಲಕಿ ಮರುದಿನ ಶನಿವಾರ ಸಂಜೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಕೂಡಲೇ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಫ್ಐಆರ್ ದಾಖಲಿಸಿದ್ದಾರೆ. 


ನಾಲ್ವರು ಮುಸುಕುಧಾರಿಗಳು ಅತ್ಯಾಚಾರ ನಡೆಸುವಾಗ ಇಬ್ಬರ ಮುಸುಕನ್ನು ಬಾಲಕಿ ಕಿತ್ತು ತೆಗೆದ ಕಾರಣ ಅವರ ಗುರುತನ್ನು ಹಿಡಿಯಬಹುದು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಪಶ್ಟಿಮ ಚಂಪರನ್ ಎಸ್ಪಿ ಜ್ಯಾಂತ್ ಕಾಂತ್, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com