ಸ್ನೇಹಿತೆಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡೋಕೆ ಏನ್ ಮಾಡ್ದಾ ಗೊತ್ತ?

ತನಗಿಂತ ಐದು ವರ್ಷಕ್ಕೆ ಹಿರಿಯಳಾದ ಯುವತಿ ಜೊತೆ ಲೈವ್ ವಿಡಿಯೋ ಕಾಲ್ ಮಾಡಿದ ಯುವಕನೋರ್ವ ಆಕೆಯ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಆಕೆಯ ಸ್ನೇಹಿತರಿಗೆ ಮಾರಲು ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Published: 16th September 2019 07:24 PM  |   Last Updated: 16th September 2019 07:25 PM   |  A+A-


Video chat

ಸಂಗ್ರಹ ಚಿತ್ರ

Posted By : Vishwanath S
Source : Online Desk

ಮುಂಬೈ: ತನಗಿಂತ ಐದು ವರ್ಷಕ್ಕೆ ಹಿರಿಯಳಾದ ಯುವತಿ ಜೊತೆ ಲೈವ್ ವಿಡಿಯೋ ಕಾಲ್ ಮಾಡಿದ ಯುವಕನೋರ್ವ ಆಕೆಯ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಆಕೆಯ ಸ್ನೇಹಿತರಿಗೆ ಮಾರಲು ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈನ ಪೊವಾಯಿಯಲ್ಲಿ ಈ ಘನಟೆ ನಡೆದಿದ್ದು ಬಂಧಿತ ಆರೋಪಿಯನ್ನು 19 ವರ್ಷದ ಜಿತನ್ ಎಂದು ಗುರುತಿಸಲಾಗಿದೆ. ಜಿತನ್ ತಾನು ಓದುತ್ತಿದ್ದ ಕಾಲೇಜಿನಲ್ಲೇ ಓದುತ್ತಿದ್ದ 24 ವರ್ಷದ ಯುವತಿ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹ ಸಂಪಾದಿಸಿದ್ದ. 

ನಂತರ ಆಕೆಯೊಂದಿಗೆ ಚಾಟ್ ಮಾಡುತ್ತಿದ್ದ ಸ್ವಲ್ಪ ದಿನ ಹೀಗೆ ಮುಂದುವರೆಯಿತು. ಆಕೆಯೊಂದಿಗೆ ಸಲುಗೆಯಿಂದ ವರ್ತಿಸಲು ಶುರು ಮಾಡಿದ್ದ. ಒಂದು ದಿನ ಲೈವ್ ವಿಡಿಯೋ ಕಾಲ್ ಮಾಡಿದ್ದ ಜಿತನ್ ಬಟ್ಟೆ ತೆಗೆಯುವಂತೆ ಹೇಳಿದ್ದಾನೆ. ಈ ವೇಳೆ ಯುವತಿಯ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. 

ಇದೇ ವಿಡಿಯೋವನ್ನು ಯುವತಿಯ ಸ್ನೇಹಿತರಿಗೆ ದುಡ್ಡಿಗೆ ಮಾರಲು ಮುಂದಾಗಿದ್ದಾನೆ. ಸ್ನೇಹಿತರಿಂದ ವಿಷಯ ತಿಳಿದ ಯುವತಿ ಪೊಲೀಸರಿಗೆ ದೂರು ನೀಡಿದ್ದು ದೂರಿನನ್ವಯ ಸದ್ಯ ಪೊಲೀಸರು ಜಿತನ್ ನನ್ನ ಬಂಧಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp