ಆದರ್ಶ ವ್ಯಕ್ತಿಯಾಗಲು ರಾಮಾಯಣದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಅಮಿತ್ ಶಾ

ರಾಮಾಯಣದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬಹುದು ಮತ್ತು ರಾಮಾಯಣ ಅನುವಾದಿತವಾಗದ ಯಾವುದೇ ಭಾಷೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ರಾಮಾಯಣದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬಹುದು ಮತ್ತು ರಾಮಾಯಣ ಅನುವಾದಿತವಾಗದ ಯಾವುದೇ ಭಾಷೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಆಯೋಜಿಸಿದ್ದ ಐದನೇ ಅಂತಾರಾಷ್ಟ್ರೀಯ ರಾಮಾಯಣ ಉತ್ಸವದಲ್ಲಿ ಮಾತನಾಡಿದ ಶಾ, ರಾಮಾಯಣವು ಶತಮಾನಗಳಷ್ಟು ಹಳೆಯದಾದ ಭಾರತೀಯ ಸಂಸ್ಕೃತಿಯ ನಿಧಿ ಮತ್ತು ವಿಶ್ವದ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಹೊಂದಿದೆ. 

ಇದು ಆದರ್ಶ ವ್ಯಕ್ತಿಯ ಜೀವನ ಮತ್ತು ಮೌಲ್ಯಗಳ ಕುರಿತು ಮಹರ್ಷಿ ವಾಲ್ಮೀಕಿಯವರ ಸಾಟಿಯಿಲ್ಲದ ಸೃಷ್ಟಿಯಾಗಿದೆ. ಇದು ಮಾನವ ಜೀವನದ ಉತ್ತುಂಗಗಳನ್ನು ಸುಂದರವಾಗಿ ಚಿತ್ರಿಸುತ್ತದೆ ಮತ್ತು ಜೀವನದಲ್ಲಿ ಕಷ್ಟಕರ ಸಂದರ್ಭಗಳಿಂದ ಉಂಟಾಗುವ ನೈತಿಕತೆ ಮತ್ತು ನೈತಿಕತೆಯ ಪ್ರಶ್ನೆಗಳಿಗೆ ಉತ್ತರಿಸುತ್ತದೆ ಎಂದರು.

ರಾಮಾಯಣವು ಉತ್ತಮ ಆಡಳಿತ, ಯುದ್ಧ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳೆಯರ ಘನತೆಯನ್ನು ಕಾಪಾಡುವುದು, ಮೊದಲಾದವುಗಳನ್ನು ವಿಭಿನ್ನ ಪಾತ್ರಗಳ ನಡುವಿನ ಸಂಭಾಷಣೆಗಳ ವಿವರಿಸಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com