ಭಾರತದ ಹಲವು ಭಾಷೆಗಳು ಅದರ ದೌರ್ಬಲ್ಯವಲ್ಲ: ರಾಹುಲ್ ಗಾಂಧಿ

ಹಿಂದಿ ದೇಶಾದ್ಯಂತ ಏಕಭಾಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ, ಭಾರತದ ಹಲವು ಭಾಷೆಗಳು ಅದರ ದೌರ್ಬಲ್ಯವಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

Published: 17th September 2019 01:05 PM  |   Last Updated: 17th September 2019 01:18 PM   |  A+A-


RahulGandhi

ರಾಹುಲ್ ಗಾಂಧಿ

Posted By : Nagaraja AB
Source : The New Indian Express

ನವದೆಹಲಿ: ಹಿಂದಿ ದೇಶಾದ್ಯಂತ ಏಕಭಾಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ, ಭಾರತದ ಹಲವು ಭಾಷೆಗಳು ಅದರ ದೌರ್ಬಲ್ಯವಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಭಾರತದ ಬಹುತೇಕ ಜನರು ಹಿಂದಿ ಮಾತನಾಡುತ್ತಾರೆ. ಇದು ಭಾರತವನ್ನು ಒಗ್ಗೂಡಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ಕರ್ನಾಟಕ, ತಮಿಳುನಾಡು ಸೇರಿದಂತೆ  ದೇಶದ ವಿವಿಧ ಪ್ರಾದೇಶಿಕ ಪಕ್ಷಗಳ ಮುಖಂಡರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.ಅಮಿತ್ ಶಾ ಹೇಳಿಕೆ ವಿರೋಧಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 23 ಭಾರತೀಯ ಭಾಷೆಗಳ ಪಟ್ಟಿಯನ್ನು ನೀಡಿದ್ದಾರೆ. 

ಮತ್ತೊಂದೆಡೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ, ಹಿಂದಿ ದೇಶದ ಅಧಿಕೃತ ಭಾಷೆಯಾಗಿದ್ದು, ಅದನ್ನು ನಾವು ಬೆಳೆಸಬೇಕಾಗಿದೆ. ಆದರೆ, ಅದರೊಂದಿಗೆ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಬೇಕಾಗಿದೆ ಎಂದು ಹೇಳಿದರು. ಅಧಿಕೃತ ಭಾಷೆಗಳ ಕಾಯ್ದೆ 1963 ಪ್ರಕಾರ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಎಂದು ಪರಿಗಣಿಸಲಾಗಿದೆ. ಸಂವಿಧಾನದ 8ನೇ ಪರಿಚೇದದಲ್ಲಿ 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp