ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬ; ಉಕ್ಕಿನ ಮನುಷ್ಯನ 'ಏಕತೆಯ ಪ್ರತಿಮೆ' ವಿಡಿಯೊ ಟ್ವೀಟ್ 

ತಮ್ಮ 69ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾಗೆ ತಲುಪಿದ ನಂತರ ಏಕತೆಯ ಪ್ರತಿಮೆ ಕುರಿತು ಟ್ವೀಟ್ ಮಾಡಿದ್ದಾರೆ. ಸರ್ದಾರ್ ಸರೋವರ ಅಣೆಕಟ್ಟು ಇರುವುದು ಇದೇ ಸ್ಥಳದಲ್ಲಿ. 
ಸರ್ದಾರ ಸರೋವರ ಅಣೆಕಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಸರ್ದಾರ ಸರೋವರ ಅಣೆಕಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಗಾಂಧಿನಗರ(ಗುಜರಾತ್): ತಮ್ಮ 69ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾಗೆ ತಲುಪಿದ ನಂತರ ಏಕತೆಯ ಪ್ರತಿಮೆ ಕುರಿತು ಟ್ವೀಟ್ ಮಾಡಿದ್ದಾರೆ. ಸರ್ದಾರ್ ಸರೋವರ ಅಣೆಕಟ್ಟು ಇರುವುದು ಇದೇ ಸ್ಥಳದಲ್ಲಿ. 


ಕೆವಾಡಿಯಾಕ್ಕೆ ಕೆಲವೇ ಹೊತ್ತುಗಳ ಹಿಂದೆ ತಲುಪಿದೆ. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಗೌರವಾರ್ಥ ಭಾರತ ನೀಡಿದ ಏಕತೆಯ ಪ್ರತಿಮೆಯ ವೈಭವವನ್ನು ಕಣ್ತುಂಬಿಕೊಳ್ಳಿ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ. 


ಇದೇ ಪ್ರತಿಮೆಯನ್ನು ಕಳೆದ ವರ್ಷ ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜಯಂತಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದರು.


ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಮೋದಿ ಇಂದು ಗಾಂಧಿನಗರದಿಂದ ಕೆವಾಡಿಯಾಕ್ಕೆ ಆಗಮಿಸಿದರು. ಏಕತೆ ಪ್ರತಿಮೆ ಹತ್ತಿರವಿರುವ ಪ್ರವಾಸೋದ್ಯಮ ಸ್ಥಳಗಳಾದ ಖಲ್ವಾನಿ ಪರಿಸರ ಸ್ನೇಹಿ ಕೇಂದ್ರ ಮತ್ತು ಜಂಗಲ್ ಸಫಾರಿ ಟೂರಿಸ್ಟ್ ಪಾರ್ಕ್ ಗೆ ಭೇಟಿ ನೀಡಿದರು.


ಭಾರತೀಯ ಜನತಾ ಪಾರ್ಟಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಸೇವಾ ಸಪ್ತಾಹ ಇಂದು ಮೊನ್ನೆ ಸೆ.14ರಿಂದ ಇದೇ 20ರವರೆಗೆ ಆಚರಿಸುತ್ತಿದೆ. ವಾರವಿಡೀ ದೇಶಾದ್ಯಂತ ಬಿಜೆಪಿ ನಾಯಕರು ಹಲವು ಸಾಮಾಜಿಕ ಕಾರ್ಯಗಳನ್ನು ಆಚರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com