ಭವಿಷ್ಯದಲ್ಲಿ ಪಿಒಕೆ ಮೇಲೆ ಭಾರತ ಕಾನೂನುಬದ್ದ ಹಕ್ಕು ಹೊಂದಲಿದೆ: ಜೈಶಂಕರ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗವಾಗಿದ್ದು ಮುಂದೊಂದು ದಿನ ಅದರ ಮೇಲೆ ಕಾನೂನು ಬದ್ದ ಹಕ್ಕು ಹೊಂದುವುದನ್ನು ಭಾರತ ನಿರೀಕ್ಷಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ
ಜೈಶಂಕರ್
ಜೈಶಂಕರ್

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗವಾಗಿದ್ದು ಮುಂದೊಂದು ದಿನ ಅದರ ಮೇಲೆ ಕಾನೂನು ಬದ್ದ ಹಕ್ಕು ಹೊಂದುವುದನ್ನು ಭಾರತ ನಿರೀಕ್ಷಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ

"ಪಿಒಕೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ, ಅದು ಭಾರತದ ಭಾಗವಾಗಿದೆ ಮತ್ತು ಒಂದು ದಿನ ನಾವು ಅದರ ಮೇಲೆ ನ್ಯಾಯಯುತವಾದ ಹಕ್ಕನ್ನು ಪಡೆಯುತ್ತೇವೆಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇನ್ನು ಮುಂದೆ ಪಾಕಿಸ್ತಾನದೊಂದಿಗಿನ ಮಾತುಕತೆ ಇದ್ದರೆ ಅದು ಪಿಒಕೆ ಬಗ್ಗೆ ಮಾತ್ರವೇ ಹೊರತು ಕಾಶ್ಮೀರದ ಬಗ್ಗೆ ಅಲ್ಲ ಎಂದು ಅವರು ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯ ವ್ಯಾಪ್ತಿಗೆ ಒಯ್ಯಲು  ಪಾಕಿಸ್ತಾನ ಪ್ರಯತ್ನಿಸಿದ ನಂತರ ಇತ್ತೀಚಿನ ದಿನಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಈ ಬಗ್ಗೆ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com