ಇ-ಸಿಗರೇಟ್ ಮಾರಾಟ, ಉತ್ಪಾದನೆ ನಿಷೇಧ: ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ದೇಶದಲ್ಲಿ ಇ-ಸಿಗರೇಟ್ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆ ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

Published: 18th September 2019 03:57 PM  |   Last Updated: 18th September 2019 03:57 PM   |  A+A-


e-cigarette

ಸಾಂದರ್ಭಿಕ ಚಿತ್ರ

Posted By : Lingaraj Badiger
Source : The New Indian Express

ನವದೆಹಲಿ: ದೇಶದಲ್ಲಿ ಇ-ಸಿಗರೇಟ್ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆ ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶದಲ್ಲಿ ಇ-ಸಿಗರೇಟ್ ನಿಷೇಧಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇ-ಸಿಗರೇಟ್ ಆಮದು, ಉತ್ಪಾದನೆ, ವಿತರಣೆ, ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.

ಧೂಮಪಾನದ ಚಟ ಬಿಡುವುದಕ್ಕೆ ಸಹಕಾರಿ ಎಂದು ಹೇಳಲಾಗುವ ಇ-ಸಿಗರೇಟ್ ಗಳನ್ನು ವಿಶ್ವಾದ್ಯಂತ ಅಪಾಯವಿಲ್ಲದ ಸರಕೆಂದು ಪರಿಗಣಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ ತಜ್ಞರ ಹೇಳಿಕೆಯ ಪ್ರಕಾರ ಇ-ಸಿಗರೇಟ್ ಗಳೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ-ಸಿಗರೇಟ್ ಗಳನ್ನು ನಿಷೇಧಿಸಿದೆ. 

ಇ-ಸಿಗರೇಟ್‌ನ ಚಟಕ್ಕೆ ಅಂಟಿಕೊಂಡವರಿಗೆ ಅದು ಆಹ್ಲಾದಕರ ಎನಿಸುತ್ತದೆ ಎಂದು ವರದಿಗಳು ಹೇಳುತ್ತವೆ. ಮೂಲಗಳ ಪ್ರಕಾರ ದೇಶದಲ್ಲಿ 400ಕ್ಕೂ ಅಧಿಕ ಇ-ಸಿಗರೇಟ್ ಬ್ರಾಂಡ್‌ಗಳಿವೆ. ಆದರೆ ಯಾವ ಇ-ಸಿಗರೇಟ್ ಕೂಡಾ ಭಾರತದಲ್ಲಿ ತಯಾರಿಕೆಯಾಗುತ್ತಿಲ್ಲ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp