ಮಗುವಿನ ಚೀರಾಟ ಸಹಿಸದೆ ಚಲಿಸುತ್ತಿದ್ದ ರೈಲಿನಿಂದ ಮಗುವನ್ನು ಹೊರಗೆಸೆದ ಕಟುಕ!
7 ತಿಂಗಳ ಮಗುವೊಂದು ಅಳುತ್ತಿರುವುದನ್ನು ಸಹಿಸದ ಕಟುಕ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
Published: 19th September 2019 12:16 PM | Last Updated: 19th September 2019 12:16 PM | A+A A-

ಸಂಗ್ರಹ ಚಿತ್ರ
ಅಯೋಧ್ಯೆ: 7 ತಿಂಗಳ ಮಗುವೊಂದು ಅಳುತ್ತಿರುವುದನ್ನು ಸಹಿಸದ ಕಟುಕ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ದೆಹಲಿ-ಫರಕ್ಕಾ ಎಕ್ಸೆಪ್ರೆಸ್'ನಲ್ಲಿ ತಾಯಿಯೊಬ್ಬಳು ತನ್ನ 7 ತಿಂಗಳ ಮಗುವಿನೊಂದಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಮಗು ಅಳಲು ಆರಂಭಿಸಿತ್ತು. ಇದರಿಂದ ಕೆಂಡಾಮಂಡಲಗೊಂಡ ವ್ಯಕ್ತಿ ಮಗುವನ್ನು ಸಮಾಧಾನಪಡಿಸುವಂತೆ ಮಹಿಳೆಗೆ ತಿಳಿಸಿದ್ದಾನೆ. ತಾಯಿ ಎಷ್ಟೇ ಸಮಾಧಾನಪಡಿಸಿದರೂ ಮಗು ಸಮಾಧಾನಗೊಂಡಿಲ್ಲ. ರೈಲು ಗೊಸೈನ್ಗಂಜ್ ರೈಲ್ವೇ ನಿಲ್ದಾಣದತ್ತ ತೆರಳುವ ವೇಳೆ ಮಗುವನ್ನು ಎತ್ತಿಕೊಂಡಿರುವ ವ್ಯಕ್ತಿ ಚಲಿಸುವ ರೈಲಿನಿಂದ ಮಗುವನ್ನು ಹೊರಗೆ ಎಸೆದಿದ್ದಾನೆಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಅಯೋಧ್ಯೆ ರೈಲೇ ಅಧಿಕಾರಿ ಸುಬೇದಾರ್ ಯಾದವ್ ಅವರು, ಆರೋಪಿಯನ್ನು ಕಮಲೇಶ್ ಎಂದು ಗುರ್ತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥನಾಗಿದ್ದಾನೆಂದು ತಿಳಿದುಬಂದಿದೆ.
ಮಗುವಿನ ತಾಯಿನ್ನು ಉಮಾ ಬುರ್ಮಾನ್ ಎಂದು ಗುರ್ತಿಸಲಾಗಿದ್ದು, ಮಹಿಳೆ ಪಶ್ಚಿಮ ಬಂಗಾಳದ ದಕ್ಷಿಣ್ ದಿನೈಜ್ಪುರ್ ನಿವಾಸಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.
ರೈಲಿನ ಬಾಗಿಲ ಬಳಿ ಹೋದ ವ್ಯಕ್ತಿ ಮಗುವನ್ನು ಹೊರಗೆ ಎಸೆಯುತ್ತಾನೆಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಘಟನೆ ಬಳಿಕ ಸ್ಥಳೀಯರು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಗುವಿಗಾಗಿ ಹುಡುಕಾಟ ಆರಂಭವಾಗಿದ್ದು, ಈವರೆಗೂ ಮಗು ದೊರಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.