ಮೂರನೇ ಮಗುವಿಗೆ ಹೆರಿಗೆ ರಜೆ ಇಲ್ಲ; ಉತ್ತರಾಖಂಡ ಹೈಕೋರ್ಟ್ ಮಹತ್ವದ ಆದೇಶ 

ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿಗೆ ಹೆರಿಗೆ ರಜೆ ನೀಡಿ ಕಳೆದ ವರ್ಷ ನೀಡಿದ್ದ ಆದೇಶವನ್ನು ಉತ್ತರಾಖಂಡ ಹೈಕೋರ್ಟ್ ಕಳೆದ ಮಂಗಳವಾರ ರದ್ದುಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ; ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿಗೆ ಹೆರಿಗೆ ರಜೆ ನೀಡಿ ಕಳೆದ ವರ್ಷ ನೀಡಿದ್ದ ಆದೇಶವನ್ನು ಉತ್ತರಾಖಂಡ ಹೈಕೋರ್ಟ್ ಕಳೆದ ಮಂಗಳವಾರ ರದ್ದುಪಡಿಸಿದೆ.


ಹೈಕೋರ್ಟ್ ನಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಮುಖ್ಯ ಸ್ಥಾಯಿ ವಕೀಲ ಪರೇಶ್ ತ್ರಿಪಾಠಿ, ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿನ ಹೆರಿಗೆಗೆ ರಜೆ ಸೌಲಭ್ಯ ನೀಡಿ ನೀಡಲಾಗಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ ಎಂದಿದ್ದಾರೆ.


ಕಳೆದ ವರ್ಷ ಜುಲೈಯಲ್ಲಿ, ರಾಜ್ಯ ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿನ ಹೆರಿಗೆಗೆ ರಜೆ ಸೌಲಭ್ಯ ನೀಡಿ ಆದೇಶ ನೀಡಿತ್ತು. ಅದನ್ನು ಮತ್ತೆ ಪರಿಶೀಲಿಸಿದ ನ್ಯಾಯಾಲಯ ಆದೇಶ ಅಸಂವಿಧಾನಿಕ ಎಂದು ಹೇಳಿ ಕಳೆದ ವರ್ಷದ ಆದೇಶವನ್ನು ರದ್ದುಪಡಿಸಿದೆ. 


2015ರ ಜೂನ್ 20ರಿಂದ ಡಿಸೆಂಬರ್ 9ರವರೆಗೆ ಆರು ತಿಂಗಳ ಹೆರಿಗೆ ಭತ್ಯೆ ಸೌಲಭ್ಯವನ್ನು ತನಗೆ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರಿ ಉದ್ಯೋಗಿ ಊರ್ಮಿಲಾ ಮಸಿಹ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com